ಬೆಂಗಳೂರು(ಜು.10): ಎಷ್ಟು ದಿನ ಎಲ್ಲೇ ಸುತ್ತಾಡಿದರೂ ರಾಜಕಾರಣಿಗಳು ಕೊರೋನಾದಿಂದ ಬಚಾವ್‌ ಆಗುತ್ತಿದ್ದರು. ಆದರೆ, ಈಗ ರಾಜಕಾರಣಿಗಳೂ ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಅವರ ಸಹವಾಸದಿಂದ ತಮಗೆಲ್ಲಿ ಸೋಂಕು ತಗುಲುತ್ತೋ ಎಂಬ ಭಯ ಅವರ ಹಿಂಬಾಲಕರನ್ನೂ ಕಾಡ ತೊಡಗಿದೆ. 

ಕೊರೋನಾ ವೈರಸ್ ಪುಡಾರಿ ರಾಜಕಾರಣಿಗಳಿಗೂ ಚಳಿ ಮುಟ್ಟಿಸಿದೆ. ಒಬ್ಬ ರಾಜಕಾರಣಿ ತಮ್ಮೂರಿಗೋ, ತಮ್ಮ ಪಕ್ಕದ ಊರಿಗೋ ಬರುತ್ತಾನೆಂದರೆ ಸಾಕು, ನಾ ಮುಂದು, ತಾಮುಂದು ಎಂದು ಗರಿ ಗರಿ ಬಿಳಿ ಷರ್ಟ್ ತೊಟ್ಟು ನಾಯಕರ ಹಿಂದೇ ಫೋಸ್ ಕೊಡೋದು ಸರ್ವೇ ಸಾಮಾನ್ಯವಾಗಿತ್ತು. ಆದರೆ ಅಂತವರೆಲ್ಲಾ ಈಗ ನಾಯಕರ ಸಹವಾಸವೂ ಸಾಕು, ಕೊರೋನಾ ಸಹವಾಸವೂ ಸಾಕೆಂದು ಮನೆಯಲ್ಲಿ ಗದ್ದೆ ತೋಟದ ಕೆಲಸ ಮಾಡುತ್ತಿದ್ದಾರೆ. 

ಕಣ್ಣೂರು ಏರ್ಪೋರ್ಟ್‌ನಿಂದ ತಪ್ಪಿಸಿಕೊಂಡ್ರಾ‌ 30ಕ್ಕೂ ಅಧಿಕ ಕನ್ನಡಿಗರು..?

ಇದರ ಪರಿಣಾಮವಾಗಿ ರಾಜಕಾರಣಿಗಳಿಗೆ ಬೆರಳೆಣಿಕೆಯಷ್ಟೂ ಹಿಂಬಾಲಕರು ಸಿಗುತ್ತಿಲ್ಲ. ಅಷ್ಟೇ ಅಲ್ಲ ರಾಜಕೀಯ ಮುಖಂಡರು ಬರುತ್ತಿದ್ದಾರೆಂದರೆ ಬೆಂಬಲಿಗರು ಮತ್ತು ಕಾರ್ಯಕರ್ತರು ಮಾರುದ್ದ ಸರಿದು ನಿಲ್ಲುತ್ತಿದ್ದಾರೆ. ಹಿಂದೆಲ್ಲಾ ತಾನು ಹೋದ ಕಡೆಯಲ್ಲೆಲ್ಲಾ ನೂರಾರು ಮಂದಿ ಬೆನ್ನಹಿಂದೆ ಇರುತ್ತಿದ್ದರು. 

ಕಾರ್ಯಕರ್ತರ ಹಿಂಡೇ ಸೇರುತ್ತಿತ್ತು. ಆದರೆ ಈಗ ಒಬ್ಬನೇ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಹಣಕೊಡುವುದಾಗಿ ಹೇಳಿದರೂ ಹತ್ತು ಜನರನ್ನು ಸೇರಿಸಲು ಆಗುತ್ತಿಲ್ಲ ಎಂದು ಖ್ಯಾತ ರಾಜಕಾರಣಿಯೊಬ್ಬರು ಸುಳ್‌ ಸುದ್ದಿಯ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.