Asianet Suvarna News Asianet Suvarna News

ಭೀಕರ ಅವಗಢಕ್ಕೆ ಸಜ್ಜಾಗಿದೆ ಈ ಬ್ರಿಡ್ಜ್ ?

ಬಿರುಕು ಬಿಟ್ಟಿದೆ ಈ ಬ್ರಿಡ್ಜ್ ; ಅವಗಢ ಸಂಭವಿಸುವ ಸಾಧ್ಯತೆ | ಇನ್ನಾದರೂ ಎಚ್ಚೆತ್ತುಕೊಳ್ಳುವುದಾ ಆಡಳಿತ ವರ್ಗ? ಏನಿದು ಸುದ್ದಿ? ಇಲ್ಲಿದೆ ಓದಿ 

Fake news circulate about Kolkata Rajpath's bridge
Author
Bengaluru, First Published Oct 4, 2018, 9:24 AM IST
  • Facebook
  • Twitter
  • Whatsapp

ಕೋಲ್ಕತ್ತಾ (ಅ.04): ಬ್ರಿಡ್ಜ್ ಮುರಿದು ಸಾಕಷ್ಟು ಅವಘಡಗಳು ಸಂಭವಿಸಿದ ಉದಾಹರಣೆಗಳಿವೆ. ಆದರೆ ಇತ್ತೀಚೆಗೆ ಕೊಲ್ಕತ್ತಾದ ರಾಜರಥದಲ್ಲಿರುವ ಸೇತುವೆಯೊಂದು ಬಿರುಕು ಬಿಟ್ಟಿದೆ.

ಮತ್ತೊಂದು ಭೀಕರ ಅವಘಡ ಸಂಭವಿಸುವ ಲಕ್ಷಣಗಳಿವೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರೊಂದಿಗೆ ಬ್ರಿಡ್ಜ್‌ವೊಂದು ಬಿರುಕುಬಿಟ್ಟಿರುವ ಫೋಟೋವನ್ನು ಲಗತ್ತಿಸಲಾಗಿದೆ. ಆ ಬ್ರಡ್ಜ್ ಇನ್ನೇನು ಕೆಲವೇ ಕ್ಷಣಗಳಲ್ಲಿ ಉರುಳಿಬಿದ್ದು, ಭೀಕರ ಅವಘಡಕ್ಕೆ ಕಾರಣವಾಗುವ ರೀತಿಯಲ್ಲಿದೆ. ಕೆಲವರು ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಮಮತಾ ಬ್ಯಾನರ್ಜಿಯವರು ಮತ್ತೊಂದು ಭೀಕರ ಅವಘಡಸಂಭವಿಸುವ ಮೊದಲು ತಪ್ಪಿಸಲು ಕ್ರಮ ಕೈಗೊಳ್ಳಲಿ ಎಂದು ಕೋರಿದ್ದಾರೆ. ಜೊತೆಗೆ ಯಾರೂ ಈ ರಸ್ತೆಯಲ್ಲಿ ಓಡಾಡಬೇಡಿ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಆದರೆ ನಿಜಕ್ಕೂ ಕೊಲ್ಕತ್ತಾ ದಲ್ಲಿ ಬ್ರಿಡ್ಜ್ ಬಿರುಕು ಬಿಟ್ಟಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ. ವಾಸ್ತವವಾಗಿ ಇದೇ ಒಕ್ಕಣೆಯನ್ನು ಬರೆದು ಎರಡು ವರ್ಷಗಳಿಂದಲೂ ಇದೇ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ಬಗ್ಗೆ 2018 ಫೆಬ್ರವರಿ 9 ರಂದು ‘ಟೆಲಿಗ್ರಾಫ್’ ವರದಿ ಮಾಡಿತ್ತು. ಅದರಲ್ಲಿ ಈ ಫೋಟೋ ಅಂದಾಜು ಎರಡು ವರ್ಷ ಹಳೆಯದು ಎಂದು ಹೇಳಿತ್ತು. ಆದಾಗ್ಯೂ ಹಲವರು ಈ ಸಂದೇಶವನ್ನು ಶೇರ್
ಮಾಡುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ಸ್ವತಃ ಕೊಲ್ಕತ್ತಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇಬಸಿಸ್ ಸೇನ್ ಅವರೇ ಪ್ರತಿಕ್ರಿಯಿಸಿ, ‘ಈ ಸುದ್ದಿ ಸಂಪೂರ್ಣ ಸುಳ್ಳು. ಅದನ್ನು ನಂಬಬೇಡಿ’ ಎಂದು ಸ್ಪಷ್ಟನೆ ನೀಡಿದ್ದಾರೆ.

Follow Us:
Download App:
  • android
  • ios