Asianet Suvarna News Asianet Suvarna News

ಎನ್‌ಡಿಎ ತೊರೆದು ಮೋದಿ ವಿರುದ್ಧ ತೊಡೆ ತಟ್ಟಿದ್ದ ನಾಯ್ಡುಗೆ ಪಶ್ಚಾತ್ತಾಪ!

ಎನ್‌ಡಿಎ ತೊರೆದಿದ್ದಕ್ಕೆ ನಾಯ್ಡುಗೆ ಪಶ್ಚಾತ್ತಾಪ| ಆ ನಿರ್ಧಾರದಿಂದಾಗಿಯೇ ಸೋತೆವು: ಟಿಡಿಪಿ ಬಾಸ್‌

Exit from NDA led to loss for TDP Former Andhra CM Chandrababu Naidu
Author
Bangalore, First Published Oct 14, 2019, 10:45 AM IST
  • Facebook
  • Twitter
  • Whatsapp

ಹೈದರಾಬಾದ್‌[ಅ.14]: ಒಂದೂವರೆ ವರ್ಷದ ಹಿಂದೆ ಕೇಂದ್ರದ ಎನ್‌ಡಿಎ ಸರ್ಕಾರದಿಂದ ಹೊರ ನಡೆದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ತೊಡೆ ತಟ್ಟಿದ್ದ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರದ ಮಾಜಿ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಇದೇ ಮೊದಲ ಬಾರಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ನಾಯ್ಡು ಮನೆ ಧ್ವಂಸಕ್ಕೆ ಆಂಧ್ರ ಸರ್ಕಾರದಿಂದ ಮತ್ತೊಂದು ನೋಟಿಸ್‌!

ಸಾರ್ವಜನಿಕ ರಾರ‍ಯಲಿಯೊಂದರಲ್ಲಿ ಪಕ್ಷದ ಕಾರ್ಯಕರ್ತರ ಮುಂದೆ ಅವರು ಎನ್‌ಡಿಎ ಕೂಟ ತೊರೆದ ತಮ್ಮ ನಿರ್ಧಾರದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಮರಾವತಿ, ಪೋಲಾವರಂ, ಹಾಗೂ ಆಂಧ್ರಕ್ಕೆ ವಿಶೇಷ ಸ್ಥಾನಮಾನ ಬೇಡಿಕೆ ಸಂಬಂಧ ಬಿಜೆಪಿ ನೇತೃತ್ವದ ಸರ್ಕಾರದಿಂದ ಹೊರಬಂದೆವು. ಕೇಂದ್ರ ಸಂಪುಟದಿಂದ ನಮ್ಮ ಸಚಿವರನ್ನೂ ಹಿಂದಕ್ಕೆ ಕರೆಸಿಕೊಂಡೆವು. ಆ ನಿರ್ಧಾರದಿಂದಾಗಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಎರಡರಲ್ಲೂ ನಮ್ಮ ಪಕ್ಷ ತೀವ್ರ ಹಿನ್ನಡೆ ಅನುಭವಿಸಬೇಕಾಯಿತು ಎಂದು ನಾಯ್ಡು ಹೇಳಿದ್ದಾರೆ.

ತೆಲುಗುದೇಶಂ ಪಕ್ಷ ಸಂಸತ್ತಿನಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಸಂದರ್ಭದಲ್ಲಿ ಸ್ನೇಹಪೂರ್ವಕವಾಗಿ ಮೋದಿ ಅವರು ಎಚ್ಚರಿಕೆಯೊಂದನ್ನು ನೀಡಿದ್ದರು. ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷದ ಬಲೆಗೆ ಬೀಳಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಆತುರದ ನಿರ್ಧಾರ ಕೈಗೊಳ್ಳದೇ ಎನ್‌ಡಿಎಎಯಲ್ಲೇ ಮುಂದುವರಿಯವಂತೆ ಸೂಚಿಸಿದ್ದರು ಎಂದು ಸ್ಮರಿಸಿದ್ದಾರೆ.

ರಾಜಕೀಯ ಹೈಡ್ರಾಮಾ: ಗೃಹ ಬಂಧನದಲ್ಲಿ ಮಾಜಿ ಮುಖ್ಯಮಂತ್ರಿ!

ತೆಲಂಗಾಣದಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡ ಬಗ್ಗೆಯೂ ನಾಯ್ಡು ಅದೇ ದನಿಯಲ್ಲಿ ಮಾತನಾಡಿದ್ದಾರೆ. ಕಾಂಗ್ರೆಸ್‌ ಜತೆಗಿನ ಮೈತ್ರಿ ಘೋರ ಪ್ರಮಾದ ಎಂಬುದು ಅರ್ಧದಲ್ಲೇ ಅರಿವಿಗೆ ಬಂತು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು ಎಂದು ಅವರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios