Asianet Suvarna News Asianet Suvarna News

ಕಾಂಗ್ರೆಸಿನಲ್ಲಿ ಸಿದ್ದರಾಮಯ್ಯ ಮತ್ತಷ್ಟು ಪವರ್ ಫುಲ್

Oct 13, 2018, 7:28 PM IST

ರಾಜ್ಯ ಕಾಂಗ್ರೆಸಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಷ್ಟು ಪವರ್'ಫುಲ್ ಆಗಿದ್ದಾರೆ. ಬಳ್ಳಾರಿ ಲೋಕಸಭಾ ಉಪಚುನಾವಣೆಯ ಹಿನ್ನಲೆಯಲ್ಲಿ ಬುಗಿಲೆದ್ದ ಭಿನ್ನಮತವನ್ನು ಸಿದ್ದು ಬ್ರೇಕ್ ಹಾಕಿದ್ದು, ಬಳ್ಳಾರಿಯ ಎಲ್ಲಾ ಶಾಸಕರಿಗೆ ಶಾಂತಿ ಪಾಠ ಮಾಡಿ ಮತ್ತೆ ಪವರ್ ಸೆಂಟರ್ ಆಗಿದ್ದಾರೆ.ಶಾಸಕರಾದ ಪರಮೇಶ್ವರ ನಾಯ್ಕ, ಭೀಮಾ ನಾಯ್ಕ, ಆನಂದ ಸಿಂಗ್, ನಾಗೇಂದ್ರ, ತುಕಾರಾಮ್ ಹಾಗೂ ಶಾಸಕ ಗಣೇಶ್ ಸಭೆಗೆ ಹಾಜರಾಗಿದ್ದರು. ಈ ಮೂಲಕ ಸಿದ್ದು ನಾಯಕತ್ವಕ್ಕೆ ಜೈ ಎಂದಿದ್ದು, ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಗೆ ಸೆಡ್ಡು ಹೊಡೆದಿದ್ದಾರೆ.