ಲಖನೌ:  ಉತ್ತರ ಪ್ರದೇಶದ ಬಿಜೆಪಿ ಮುಖಂಡರೋರ್ವರ ಹೇಳಿಕೆ ಇದೀಗ  ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. 

ಬೈರಿಯಾ ಬಾಸ್ತಿ  ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್  ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು  ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ರಾಮನೇ ಧರೆಗೆ ಇಳಿದು ಬಂದರೂ ಕೂಡ ಇಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಇಂತಹ ಘಟನೆಗಳು ಮನಸ್ಸುಗಳು ಎಷ್ಟು ಹಾಳಾಗಿವೆ ಎನ್ನುವುದನ್ನು ತಿಳಿಸುತ್ತದೆ ಎಂದು ಹೇಳಿದ್ದಾರೆ. ಸಚಿವರ ಇಂತಹ ಹೇಳಿಕೆಯು ಇದೀಗ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. 

ಇಂತಹ ಘಟನೆಗಳನ್ನು ತಡೆಯಲು ಉತ್ತಮ ನಡೆಯನ್ನು ಮಕ್ಕಳಿಂದಲೇ ತಿಳಿಸಬೇಕಾದ ಅಗತ್ಯವಿದೆ.  ಉತ್ತಮ ನಡೆ ನುಡಿಗಳನ್ನು ರೂಢಿಸಿಕೊಂಡಾಗಲಷ್ಟೇ ಇಂತಹ ಘಟನೆಗಳು ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. 

ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಕೇವಲ ಜೈಲಿಗೆ ಅಟ್ಟುವುದಲ್ಲದೇ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಹೇಳಿದ್ದಾರೆ.