ಥೂ ನಿನ್ ಜನ್ಮಕ್ಕೆ: ಲವರ್ ಜೊತೆ ಸೇರಿ ಹುಡುಗಿಯರ ನಗ್ನ ಫೋಟೋ ತೆಗಿತಿದ್ನಂತೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Sep 2018, 3:15 PM IST
Engineering student arrested for taking nude videos of classmate
Highlights

ಪ್ರಿಯತಮೆ ಸಹಾಯದಿಂದ ಮಾಡಬಾರದ ಕೆಲಸ ಮಾಡಿದ! ಯುವತಿಯರ ನಗ್ನ ಚಿತ್ರ ಕ್ಲಿಕ್ಕಿಸಿ ಜೈಲುಪಾಲಾದ ಯುವಕ! ಹಾಸ್ಟೆಲ್ ನಲ್ಲಿ ಗುಪ್ತ ಕ್ಯಾಮರಾ ಇರಿಸಿ ಫೋಟೋ ತೆಗೆಯುತ್ತಿದ್ದ! ಈತನ ಕುಕೃತ್ಯಕ್ಕೆ ಪ್ರೇಯಸಿಯೇ ನೀಡುತ್ತಿದ್ದಳು ಸಾಥ್
 

ಬೆಂಗಳೂರು(ಸೆ.4): ಸಿಕ್ಕ ಪ್ರೇಯಸಿಯೊಂದಿಗೆ ಚೆಂದದ ಜೀವನ ಕಳೆಯಬೇಕಿದ್ದ ಯುವಕ, ಆಕೆಯ ಸಹಾಯದೊಂದಿಗೆ ಮಾಡಬಾರದ ಕೆಲಸಕ್ಕೆ ಕೈ ಹಾಕಿ ಕಂಬಿ ಎಣಿಸುತ್ತಿದ್ದಾನೆ.

ಪ್ರಿಯತಮೆ ಸಹಾಯದಿಂದ ಸಹಪಾಠಿ ಯುವತಿಯರ ಬಾತ್‌ರೂಮ್‌ಗಳಲ್ಲಿ ಸ್ಪೈ ಕ್ಯಾಮರಾ ಅಳವಡಿಸಿ ಆಕ್ಷೇಪಾರ್ಹ ಚಿತ್ರ ಸೆರೆ ಹಿಡಿಯುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. 

ತಮಿಳುನಾಡಿನ ತಂಜಾವೂರು ಮೂಲದ ಸಿದ್ದಾರ್ಥ ಎಂಬಾತನೇ ಬಂಧಿತ ಆರೋಪಿ. ಈತ ನಗರದ ಎಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದು, ಯುವತಿಯರ ಜೊತೆ ಅಸಭ್ಯ ವರ್ತನೆ ಆರೋಪಕ್ಕೆ ತುತ್ತಾಗಿ ಕಾಲೇಜಿನಿಂದ ಅಮಾನತು ಕೂಡ ಆಗಿದ್ದಾನೆ. 

ನಕಲಿ ಫೇಸ್‌ಬುಕ್ ಖಾತೆಯನ್ನು ಮಾಡಿಕೊಂಡಿದ್ದ ಆರೋಪಿ ಸಿದ್ದಾರ್ಥ, ಸೆರೆ ಹಿಡಿದ ದೃಶ್ಯಾವಳಿಗಳನ್ನು ಅದರಲ್ಲಿ ಅಪ್ಲೋಡ್ ಮಾಡುತ್ತಿದ್ದ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ. 

ಕೃತ್ಯ ಸಂಬಂಧ ಆರೋಪಿ ಸಿದ್ದಾರ್ಥ ಪ್ರೆಯಸಿಯನ್ನು ಸಹ ವಿಚಾರಣೆ ನಡೆಸಿದಾಗ ಆಕೆ ಕೆಲವು ಬೆಚ್ಚಿ ಬೀಳಿಸುವ ಮಾಹಿತಿ ನೀಡಿದ್ದಳೆ. ಸಿದ್ದಾರ್ಥ ಪ್ರೀತಿಯ ಬಲೆಯಲ್ಲಿ ಬಿದ್ದ ಸಮಯದಲ್ಲಿ ಈಕೆ ತನ್ನ ನಗ್ನ ಚಿತ್ರಗಳನ್ನು ಆತನಿಗೆ ಕಳುಹಿಸಿದ್ದಾಳೆ. 

ಇದನ್ನೇ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡತೊಡಗಿದ ಸಿದ್ದಾರ್ಥ, ಬೇರೆ ಯುವತಿಯರ ನಗ್ನ ಚಿತ್ರ ಕಳುಹಿಸುವಂತೆಯೂ ಇಲ್ಲದಿದ್ದರೆ ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಯುವತಿ ತಿಳಿಸಿದ್ದಾಳೆ.

ಸದ್ಯ ಯುವಕನನ್ನು ಬಂಧಿಸಿರುವ ಪೊಲೀಸರು, ಆತನ ನಕಲಿ ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

loader