Asianet Suvarna News Asianet Suvarna News

ಕರಾಳ ತುರ್ತು ಪರಿಸ್ಥಿತಿಗೆ 46 ವರ್ಷ, ಚೊಚ್ಚಲ ವಿಶ್ವಕಪ್‌ಗೆ 38ರ ಹರುಷ; ಜೂ.25ರ ಟಾಪ್ 10 ಸುದ್ದಿ!

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹುಟ್ಟೂರಿಗೆ ರೈಲಿನಲ್ಲಿ ಪ್ರಯಾಣಿಸೋ ಮೂಲಕ ಅಬ್ದುಲ್ ಕಲಾಂ ಬಳಿಕ ರೈಲು ಪ್ರಯಾಣ ಮಾಡಿದ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ. ಇತ್ತ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಗೆ 44 ವರ್ಷ ಸಂದಿದೆ. ದೆಹಲಿ  4 ಪಟ್ಟು ಆಮ್ಲಜನಕ್ಕೆ ಬೇಡಿಕೆ ಇಟ್ಟು ಅಭಾವ ಸೃಷ್ಟಿಸಿತು ಎಂದ ಸುಪ್ರೀಂ ಕೋರ್ಟ್ ಸಮಿತಿ. ಭಾರತದ ಚೊಚ್ಚಲ ವಿಶ್ವಕಪ್ ಸಂಭ್ರಕ್ಕೆ 38 ವರ್ಷ, ಭಾವುಕರಾದ ದಿವ್ಯಾ ಉರುಡುಗ ಸೇರಿದಂತೆ ಜೂನ್ 25ರ ಟಾಪ್ 10 ಸುದ್ದಿ ಇಲ್ಲಿವೆ
 
Emergency 1975 Haunts India to world cup 1983 top 10 News of June 25 ckm
Author
Bengaluru, First Published Jun 25, 2021, 4:44 PM IST

ಅಬ್ದುಲ್ ಕಲಾಂ ಬಳಿಕ ರೈಲು ಹತ್ತಿದ ಭಾರತದ ಮೊದಲ ರಾಷ್ಟ್ರಪತಿ; ಹುಟ್ಟೂರಿನತ್ತ ಕೋವಿಂದ್ ಪ್ರಯಾಣ!...

Emergency 1975 Haunts India to world cup 1983 top 10 News of June 25 ckmEmergency 1975 Haunts India to world cup 1983 top 10 News of June 25 ckm

ಎಲ್ಲರೂ ವಿಮಾನ, ಹೆಲಿಕಾಪ್ಟರ್, ಕಾರಿನ ಮೂಲಕ ಪ್ರಯಾಣ ಮಾಡುತ್ತಾರೆ. ಆದರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಎಲ್ಲರಿಗೂ ಮಾದರಿಯಾಗಿದ್ದಾರೆ. ತಮ್ಮ ಹುಟ್ಟೂರಿಗೆ ರಾಮನಾಥ್ ಕೋವಿಂದ್ ಹಾಗೂ ಪತ್ನಿ ರೈಲಿನ ಮೂಲಕ ಪ್ರಯಾಣಿಸಿದ್ದಾರೆ.

ತುರ್ತು ಪರಿಸ್ಥಿತಿಗೆ 46 ವರ್ಷ: ಕಪ್ಪುದಿನವೆಂದು ಟ್ವೀಟ್ ಮಾಡಿದ ಮೋದಿ!...

Emergency 1975 Haunts India to world cup 1983 top 10 News of June 25 ckmEmergency 1975 Haunts India to world cup 1983 top 10 News of June 25 ckm

1975ರ ಜೂನ್ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಇದು ಭಾರತದ ಇತಿಹಾದ ಅತ್ಯಂತ ಕಳಂಕಿತ ರಾಜಕೀಯ ಕ್ರಮ ಎನ್ನಲಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ಈ ವಿಚಾರವಾಗಿ ಟ್ವೀಟ್ ಒಂದನ್ನು ಮಾಡಿದ್ದು, ಇಂದಿರಾ ಗಾಂಧಿ ಎಮರ್ಜೆನ್ಸಿ ಹೇರಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ತುಳಿದು ಹಾಕಿದ್ದರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕಪ್ಪು ದಿನವನ್ನು ಯಾವತ್ತಿಗೂ ಮರೆಯಲಾಗುವುದಿಲ್ಲ ಎಂದೂ ಹೇಳಿದ್ದಾರೆ.

4 ಪಟ್ಟು ಹೆಚ್ಚು ಆಕ್ಸಿಜನ್‌ಗೆ ಬೇಡಿಕೆ ಇಟ್ಟಿದ್ದ ದೆಹಲಿ: ಇತರ ರಾಜ್ಯದಲ್ಲಿ ಹಾಹಾಕಾರ!...

Emergency 1975 Haunts India to world cup 1983 top 10 News of June 25 ckmEmergency 1975 Haunts India to world cup 1983 top 10 News of June 25 ckm

ಬಿಕ್ಕಟ್ಟಿನ ಸಂದರ್ಭದಲ್ಲಿ ದೆಹಲಿ ಸರಕಾರ ಆಕ್ಸಿಜನ್ ಕೊರತೆಯನ್ನು ಮುಂದಿಟ್ಟುಕೊಂಡು 4 ಪಟ್ಟು ಹೆಚ್ಚು ಆಮ್ಲಕಜನಕ್ಕೆ ಬೇಡಿಕೆ ಇಟ್ಟಿತ್ತು ಎಂದು ಸುಪ್ರೀಂಕೋರ್ಟ್‌ನ ಸಮಿತಿಯೊಂದು ತನ್ನ ಮಧ್ಯಂತರ ವರದಿಯಲ್ಲಿ ಹೇಳಿದೆ.

85 ದೇಶಗಳಿಗೆ ಹಬ್ಬಿದ ಡೆಲ್ಟಾ, ಭಾರೀ ಆತಂಕ!...

Emergency 1975 Haunts India to world cup 1983 top 10 News of June 25 ckmEmergency 1975 Haunts India to world cup 1983 top 10 News of June 25 ckm

ಭಾರತದಲ್ಲಿ ಕೊರೋನಾ 2ನೇ ಅಲೆ ತೀವ್ರವಾಗಿ ಹಬ್ಬಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿರುವ ಹಾಗೂ ಭಾರತದಲ್ಲೇ ಮೊದಲು ಪತ್ತೆಯಾದ ಕೊರೋನಾ ವೈರಸ್‌ನ ರೂಪಾಂತರಿ ತಳಿಯಾದ ಡೆಲ್ಟಾವೈರಸ್‌ ಇದೀಗ ವಿಶ್ವದ 85 ದೇಶಗಳಿಗೆ ಹಬ್ಬಿ ತೀವ್ರ ಆತಂಕ ಮೂಡಿಸಿದೆ. ಕೋವಿಡ್‌ನ ಉಳಿದೆಲ್ಲಾ ರೂಪಾಂತರಿ ವೈರಾಣುಗಳಿಗಿಂತ ಅತ್ಯಧಿಕವಾಗಿ ಪ್ರಸರಣವಾಗುವ ಈ ಮಾದರಿ ವಿಶ್ವದ ಹಲವು ದೇಶಗಳಲ್ಲಿ ಪತ್ತೆಯಾಗುತ್ತಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

ಕಪಿಲ್ ಡೆವಿಲ್ಸ್‌ ಪಡೆದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿಗಿಂದು 38ರ ಸಂಭ್ರಮ...

Emergency 1975 Haunts India to world cup 1983 top 10 News of June 25 ckmEmergency 1975 Haunts India to world cup 1983 top 10 News of June 25 ckm

ಭಾರತೀಯ ಕ್ರಿಕೆಟ್‌ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆದಿಡಲ್ಪಟ್ಟಿರುವ ದಿನವೆಂದರೆ ಅದು ಜೂನ್ 25, 1983. ಇಂದಿಗೆ ಭರ್ತಿ 38 ವರ್ಷಗಳ ಹಿಂದೆ ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ದೈತ್ಯ ಕೆರಿಬಿಯನ್ನರನ್ನು ವಿಶ್ವಕಪ್‌ ಫೈನಲ್‌ನಲ್ಲಿ ಮಣಿಸಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಏಕದಿನ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇದರೊಂದಿಗೆ ಭಾರತ ಕ್ರಿಕೆಟ್ ತಂಡದ ಭವಿಷ್ಯವೇ ಬದಾಲಾಗಿ ಹೋಯಿತು.

ಕೊರೋನಾದಿಂದ ಕುಟುಂಬಸ್ಥರನ್ನು ಕಳೆದುಕೊಂಡ ದಿವ್ಯಾ ಉರುಡುಗ ಭಾವುಕ!...

Emergency 1975 Haunts India to world cup 1983 top 10 News of June 25 ckmEmergency 1975 Haunts India to world cup 1983 top 10 News of June 25 ckm

72 ದಿನಗಳನ್ನು ಬಿಗ್ ಬಾಸ್‌ ಮನೆಯಲ್ಲಿ ಪೂರೈಸಿ ಆನಂತರ  42 ದಿನಗಳ ಕಾಲ ಬಿಗ್ ಬಾಸ್ ಮನೆಯಿಂದ ಹೊರಗಿದ್ದ ಸ್ಪರ್ಧಿಗಳು ಮತ್ತೆ 28 ದಿನ ದೂರದಲ್ಲಿರುವ ಫಿನಾಲೆಗೆ ಒಂದಾಗಿದ್ದಾರೆ.  ಈ ಅವಧಿಯಲ್ಲಿ ಯಾರೆಲ್ಲಾ ಏನೆಲ್ಲಾ ಮಾಡಿದರು, ದಿನ ಹೇಗೆ ಕಳೆದರು ಎಂದು ಚರ್ಚಿಸುತ್ತಿದ್ದರು. ಈ ವೇಳೆ ದಿವ್ಯಾ ಉರುಡುಗ ಭಾವುಕರಾಗಿದ್ದಾರೆ. 

ಶತಮಾನದ ದಾನಿ: ಬಿಲ್‌ಗೇಟ್ಸ್‌ ಹಿಂದಿಕ್ಕಿದ ಹೆಮ್ಮೆಯ ಭಾರತೀಯ ಜಮ್‍ಸೆಟ್‍ಜಿ ಟಾಟಾ!...

Emergency 1975 Haunts India to world cup 1983 top 10 News of June 25 ckmEmergency 1975 Haunts India to world cup 1983 top 10 News of June 25 ckm

ವಿಶ್ವದ ಗ್ರೇಟ್‌ ದಾನಿಗಳಲ್ಲಿ ನಮ್ಮ ಹೆಮ್ಮೆಯ ಭಾರತೀಯ. ಶತಮಾನದ ದಾನಶೂರ ನಂಬರ್ ವನ್ ಜಮ್‍ಸೆಟ್‍ಜಿ ಟಾಟಾ. ದೇಶ ಕಟ್ಟಿದ ಭಾರತೀಯ ಉದ್ಯಮದ ಪಿತಾಮಹ ಎಂದೇ ಕರೆಯಲಾಗುವ ಜಮ್‍ಸೆಟ್‍ಜಿ ಟಾಟಾಜಗತ್ತಿನ ನಂಬರ್‌ ವನ್ ದಾನಿಯಾಗಿದ್ದು ಹೇಗೆ?

ಸೋಂಕಿತರಿಗೆ ಹೆಚ್ಚಿನ ಬಿಲ್ ಹಾಕಿದ್ದ ಆಸ್ಪತ್ರೆಯಿಂದ ಜನರಿಗೆ ಹಣ ಮರು ಪಾವತಿ...

Emergency 1975 Haunts India to world cup 1983 top 10 News of June 25 ckmEmergency 1975 Haunts India to world cup 1983 top 10 News of June 25 ckm

ಸೆಕ್ಟರ್ 69 ರಲ್ಲಿರುವ ಮಾಯೊ ಆಸ್ಪತ್ರೆ (ಈಗ ಮೌಂಟ್ ಸ್ಟಾರ್ ಆಸ್ಪತ್ರೆ) ವಿರುದ್ಧ ಬ್ಲ್ಯಾಕ್‌ಮಾರ್ಕೆಟಿಂಗ್ ರಿಮೆಡಿಸಿವಿರ್ ಚುಚ್ಚುಮದ್ದು ಮತ್ತು ಕೋವಿಡ್ -19 ಚಿಕಿತ್ಸೆಯ ಕಾರಣದಿಂದಾಗಿ ಅಧಿಕ ಶುಲ್ಕ ವಿಧಿಸಿದ ಪ್ರಕರಣವನ್ನು ದಾಖಲಿಸಿದ ಸುಮಾರು ಒಂದು ತಿಂಗಳ ನಂತರ, ಆಸ್ಪತ್ರೆಯ ಅಧಿಕಾರಿಗಳು 28 ರೋಗಿಗಳಿಗೆ ಸುಮಾರು 25 ಲಕ್ಷ ಹಣವನ್ನು ಹಿಂದಿರುಗಿಸಿದ್ದಾರೆ.

ಅನ್‌ಲಾಕ್‌ ಆದ ಬೆನ್ನಲ್ಲೇ ಕೆಜಿಎಫ್ ಹವಾ ಶುರು; ಯಾವಾಗ ರಿಲೀಸ್?...

Emergency 1975 Haunts India to world cup 1983 top 10 News of June 25 ckmEmergency 1975 Haunts India to world cup 1983 top 10 News of June 25 ckm

ಕೊರೋನಾ ವೈರಸ್‌ನಿಂದ ಭಾರತ ಅನ್‌ಲಾಕ್‌ ಆಗುತ್ತಿದ್ದಂತೆ 5 ಭಾಷೆಯಲ್ಲಿ ಕೆಜಿಎಫ್- 2 ಸಿನಿಮಾ ರಿಲೀಸ್‌ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಗೌರಿ-ಗಣೇಶ್ ಹಬ್ಬ ದಿನ ಬಿಗ್ ಸರ್ಪ್ರೈಸ್ ಕೊಡುವುದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ. ಆದರೆ ಚಿತ್ರಮಂದಿರಗಳು ಓಪನ್ ಆಗದ ಕಾರಣ ಯಶ್ ಡಿಸೆಂಬರ್‌ನಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡುತ್ತಾರಾ?

Follow Us:
Download App:
  • android
  • ios