Asianet Suvarna News Asianet Suvarna News

ಜನವರಿಯಲ್ಲೇ ನಡೆಯಲಿದೆ ಚುನಾವಣೆ

ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ ಹಗ್ಗಜಗ್ಗಾಟ  ಮುಂದುವರಿದಿದ್ದು, ಜನವರಿ ಮೊದಲ ವಾರ ಮತ್ತೆ ಚುನಾವಣಾ ಮುಹೂರ್ತ ನಿಗದಿಯಾಗುವ ಸಾಧ್ಯತೆ ಇದೆ. ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳಿಗಾಗಿ ಚುನಾವಣೆ ನಡೆಸಲಾಗುತ್ತದೆ. 

Elections for BBMP Standing Committees on January First Week
Author
Bengaluru, First Published Dec 30, 2018, 10:18 AM IST
  • Facebook
  • Twitter
  • Whatsapp

ಬೆಂಗಳೂರು :  ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ ಹಗ್ಗಜಗ್ಗಾಟ  ಮುಂದುವರಿದಿದ್ದು, ಜನವರಿ ಮೊದಲ ವಾರ ಮತ್ತೆ ಚುನಾವಣಾ ಮುಹೂರ್ತ ನಿಗದಿಯಾಗುವ ಸಾಧ್ಯತೆ ಇದೆ. ಮೇಯರ್ ಚುನಾವಣೆ ನಡೆದು ಮೂರು ತಿಂಗಳಾದರೂ ಸ್ಥಾಯಿ ಸಮಿತಿಗಳ ಅಧ್ಯಕ್ಷ ಚುನಾವಣೆಗೆ ಕಾಲ ಕೂಡಿ ಬಂದಿಲ್ಲ.

 ಒಮ್ಮೆ ನಿಗದಿಯಾಗಿದ್ದ ಚುನಾವಣೆ ವೇಳೆ ಕೆಲವು ಅಧ್ಯಕ್ಷ ಸ್ಥಾನಗಳು ಮೈತ್ರಿ ಆಡಳಿತದ ಅಭ್ಯರ್ಥಿ ಗಳ ಕೈತಪ್ಪುವ ಸಾಧ್ಯತೆಯಿಂದ ಮುಂದೂಡಲ್ಪಟ್ಟಿತ್ತು. 

ಇದೀಗ ಜನವರಿ ಮೊದಲನೇ ವಾರ ದಲ್ಲಿ ಸ್ಥಾಯಿ ಸಮಿತಿ ಚುನಾವಣೆ ನಡೆಸಲು ಸಮಯ ನಿಗದಿಗೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮುಂದಾಗಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿರುವ ಜೆಡಿಎಸ್‌ನ ಅಸಮಾಧಾನಿತ ಸದಸ್ಯರಾದ  ದೇವದಾಸ್ ಹಾಗೂ ಮಂಜುಳಾ ನಾರಾಯಣ ಸ್ವಾಮಿ ಜೊತೆ ಮಾತುಕತೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಹೇಳಿದ್ದಾರೆ. 

ಕಳೆದ ಬಾರಿಯೂ ಪಕ್ಷದ ವಿರುದ್ಧ ಬಂ ಡಾಯ ಎದ್ದು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಪ್ರತಿಭಟನೆ ನಡೆದು ಚುನಾವಣೆ ಮುಂದೂಡ ಲಾಗಿತ್ತು. ಈ ಬಾರಿ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸ್ಥಾನ ಯಾರಿಗೆ ನೀಡಬೇಕು ಎಂಬ ಬಗ್ಗೆ ಮುಖಂಡರ ಜೊತೆ ಚರ್ಚೆ ನಡೆಸಬೇಕಿದೆ. ಅನಂತರ ಒಮ್ಮತದ ನಿರ್ಧಾರ ತೆಗೆದುಕೊಂಡು ಬಳಿಕ ಚುನಾವಣೆ ನಡೆಯಲಿದೆ. 

ಆದರೆ ಒಮ್ಮತದ ನಿರ್ಧಾರಕ್ಕೆ ಬರದಿದ್ದರೆ ಸ್ಥಾಯಿ ಸಮಿತಿ ಅಧ್ಯಕ್ಷ ಚುನಾವಣೆ ವೇಳೆ ಎರಡರಿಂದ ಮೂರು ಸ್ಥಾಯಿ ಸಮಿತಿಗಳು ಕಾಂಗ್ರೆಸ್ -ಜೆಡಿಎಸ್ ಮೈತ್ರಿಯ ಕೈ ಬಿಟ್ಟು ಹೋಗಲಿವೆ. ಇನ್ನೊಂದೆಡೆ ಶಾಸಕ ರಾಮಲಿಂಗಾರೆಡ್ಡಿ, ಈ ಬಾರಿ ಸಚಿವ ಸ್ಥಾನ ಕೈತಪ್ಪಿದ್ದರಿಂದ ಮುಖಂಡರೊಂದಿಗೆ ಮಾತುಕತೆಗೆ ಮುಂದಾಗಿ ಸಮಸ್ಯೆ ಬಗೆಹರಿಸುವುದು ಅನುಮಾನ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಮೇಯರ್ ಗಂಗಾಂಬಿಕೆ, ಸದಸ್ಯರೆಲ್ಲ ವರ್ಷಾಂತ್ಯವಾಗಿದ್ದರಿಂದ ಬೇರೆ ಬೇರೆ ಊರುಗಳಲ್ಲಿದ್ದು, ವಾಪಸ್ ಬಂದ ತಕ್ಷಣ ಚುನಾವಣೆ ದಿನಾಂಕ ನಿಗದಿ ಮಾಡಲಾಗುವುದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಸ್ಥಾಯಿ  ಸಮಿತಿ ಚುನಾವಣೆಗಳು ಈಗಾಗಲೇ ಮೂರು ತಿಂಗಳು ಮುಂದೂಡಲಾ ಗಿದ್ದು, ಜನವರಿಯಲ್ಲೂ ಅಧ್ಯಕ್ಷರ ಆಯ್ಕೆ ನಡೆ ಯದೆ ಹೋದರೆ  2019 - 20ನೇ ಸಾಲಿನ ಬಜೆಟ್ ಮೇಲೆ ಪರಿಣಾಮ ಬೀರಲಿದೆ. ಫೆಬ್ರುವರಿಯಲ್ಲಿ ರಾಜ್ಯ ಬಜೆಟ್ ಬಳಿಕ ಬಿಬಿಎಂಪಿ ಬಜೆಟ್ ನಡೆ ಯಬೇಕಿದ್ದು, ಇದರ ಸಿದ್ಧತೆಗೆ ತೆರಿಗೆ ಮತ್ತು ಆರ್ಥಿ ಕ ಸ್ಥಾಯಿ ಸಮಿತಿಗೆ ಸಮಯಾವಕಾಶದ ಕೊರತೆಯಾಗಲಿದೆ.

Follow Us:
Download App:
  • android
  • ios