Asianet Suvarna News Asianet Suvarna News

ಕೇಂದ್ರ ಚುನಾವಣೆ ಆಯೋಗ ಮೋದಿ ಕೈಗೊಂಬೆ ಆಯ್ತೆ? ಇಲ್ಲಿದೆ ಸಾಕ್ಷಿ

ಕೇಂದ್ರ ಚುನಾವಣೆ ಆಯೋಗ ಪ್ರಧಾನಿ ನರೇಂದ್ರ ಮೋದಿ ಅವರ ಕೈಗೊಂಬೆ ಆಯ್ತಾ? ಇದಕ್ಕೆ ಸಾಕ್ಷಿ ಇಲ್ಲಿದೆ.

Election Commission Differs Timing Of Presser Draws Flak
Author
Bengaluru, First Published Oct 6, 2018, 2:45 PM IST
  • Facebook
  • Twitter
  • Whatsapp

ನವದೆಹಲಿ, (ಅ.6): ಕೇಂದ್ರ ಚುನಾವಣೆ ಆಯೋಗ ಪ್ರಧಾನಿ ನರೇಂದ್ರ ಮೋದಿ ಅವರ ಕೈಗೊಂಬೆ ಆಯ್ತಾ? ಇಂತಹದೊಂದು ಪ್ರಶ್ನೆ ಉದ್ಭವಿಸಿದೆ.

ಇದಕ್ಕೆ ಕಾರಣ ಕೇಂದ್ರ ಚುನಾವಣೆ ಆಯೋಗವು ಪಂಚರಾಜ್ಯ ಚುನಾವಣೆ ದಿನಾಂಕ ಘೋಷಣೆ ಸುದ್ದಿಗೋಷ್ಠಿ ಸಮಯವನ್ನು ಮುಂದೂಡಿರುವುದು.

ಹೌದು..ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ ಗಢ ಹಾಗೂ ಮಿಜೋರಾಮ್ ರಾಜ್ಯಗಳ ವಿಧಾನಸಭೆ ಚುನಾವಣಾ ದಿನಾಂಕವನ್ನು ಘೋಷಿಸಲು ಕೇಂದ್ರ ಚುನಾವಣೆ ಆಯೋಗವು ಇಂದು 12 ಗಂಟೆಗೆ ಸುದ್ದಿಗೋಷ್ಠಿ ಕರೆದಿತ್ತು.

ಆದರೆ, ಇದೀಗ 3 ಗಂಟೆಗೆ ಮುಂದೂಡಿದೆ. ಇದು ವಿರೋಧ ಪಕ್ಷದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ ರಾಜಸ್ಥಾನದ ಅಜ್ಮೀರ್ ನಲ್ಲಿ ರ್ಯಾಲಿ ನಿಗದಿಯಾಗಿದ್ದು, ಇದಕ್ಕೆ ನೀತಿ ಸಂಹಿತಿ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಚುನಾವಣೆ ಆಯೋಗ ತನ್ನ ಸುದ್ದಿಗೋಷ್ಠಿ ಮುಂದೂಡಿದೆ.

ಮೋದಿ ಅನುಕೂಲಕ್ಕೆ ಈ ರೀತಿ ಮಾಡಲಾಗಿದ್ದು,ಇದರಲ್ಲಿಯೇ ತಿಳಿಯುತ್ತೆ ಚುನಾವಣೆ ಆಯೋಗ ಮೋದಿ ಅವರ ಕೈಗೊಂಬೆಯಾಗಿದೆ ಎಂದು ಆರೋಪಿಸಿದ್ದಾರೆ.

Follow Us:
Download App:
  • android
  • ios