ನವದೆಹಲಿ[ಜ.31]  ಗಣಿ ಅಕ್ರಮಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಮೇಲೆ ದಾಳಿ ಮಾಡಿದ್ದ ಜಾರಿ ನಿರ್ದೇಶನಾಲಯ  ಇದೀಗ ಮಾಯಾವತಿ ಅವರಗೆ ಸಂಬಂಧಿಸಿದ ಎಳು ಕಡೆ ದಾಳಿ ಮಾಡಿದೆ.

ಉತ್ತರ ಪ್ರದೇಶದ 7 ಕಡೆ ಇಡಿ ದಾಳಿ ಮಾಡಿದ್ದು ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದ ಮಾಹಿತಿ ಕಲೆ ಹಾಕಿದೆ. ಪ್ರತಿಮೆಗಳ ನಿರ್ಮಾಣದಲ್ಲಿ ಅವ್ಯವಹಾರ ಆರೋಪ  ಕೇಳಿ ಬಂದ ನಂತರ ದಾಳಿ ಮಾಡಲಾಗಿದೆ.  ಮಾಯಾವತಿ ಸಿಎಂ ಆಗಿದ್ದ ವೇಳೆ ಉತ್ತರ ಪ್ರದೇಶದಲ್ಲಿ ಆನೆ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದರು.

ಮಾಯಾವತಿ ಗಂಡಸೂ ಅಲ್ಲ, ಹೆಂಗಸೂ ಅಲ್ಲ: ಶಾಸಕಿ ವಿವಾದಾತ್ಮಕ ಹೇಳಿಕೆ

ಆನೆಗಳ ಪ್ರತಿಮೆ ನಿರ್ಮಾಣಕ್ಕೆ 111 ಕೋಟಿ ರೂ. ಮೀಸಲಿರಿಸಲಾಗಿತ್ತು. ಅಕ್ರಮ ಹಣ ವರ್ಗಾವಣೆ ಸಂಬಂಧ ಮಾಯಾವತಿ ಅವರನ್ನು ವಿಚಾರಣೆಗೆ ಗುರಿ  ಮಾಡುವ ಸಾಧ್ಯತೆ ಇದೆ. ಮಾಯಾವತಿ 2007 ರಿಂದ 2012ರ ಅವಧಿಯಲ್ಲಿ ಉತ್ತರ ಪ್ರದೇಶದ ಸಿಎಂ ಆಗಿದ್ದರು.