ನವದೆಹಲಿ (ಜ. 18): 2019 ರ ಲೋಕ ಚುನಾವಣೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ‘ಸುಳ್ಳು ಸುದ್ದಿ’ ಕುರಿತು ತನಿಖೆ ಕೈಗೊಳ್ಳಲು ನಗರ ಪೊಲೀಸರಿಗೆ ಕೋರುವಂತೆ ಕೇಂದ್ರ ಚುನಾವಣಾ ಆಯೋಗವು ದೆಹಲಿ ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶಿಸಿದೆ.

ಈ ಹಿನ್ನೆಲೆ ದೆಹಲಿ ಪೊಲೀಸರಿಗೆ ಗುರುವಾರ ಪತ್ರ ಬರೆದಿರುವ ದೆಹಲಿ ಮುಖ್ಯ ಚುನಾವಣಾಧಿಕಾರಿಯು, ಈ ಸಂಬಂಧ ಶೀಘ್ರ ತನಿಖೆ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಇತ್ತೀಚೆಗೆ ವಾಟ್ಸಪ್ ಸೇರಿ ವಿವಿಧ ಸಾಮಾಜಿಕ ಜಾಲತಾಣದಲ್ಲಿ 2019 ರ ಲೋಕಸಭಾ ಚುನಾವಣೆ ದಿನಾಂಕ ಪ್ರಕಟಗೊಂಡಿದೆ ಎಂಬ ಸುದ್ದಿ ಹಬ್ಬಿತ್ತು.