Asianet Suvarna News Asianet Suvarna News

ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಗೊಬ್ಬರ ದರ ಇಳಿಕೆ ಮಾತುಗಳನ್ನಾಡಿದ ಗೌಡ್ರು

ಮೋದಿ ಸಂಪುಟದಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ಡಿ.ವಿ.ಸದಾನಂದಗೌಡ ಅವರು ಇಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ರಸಗೊಬ್ಬರದ ದರ ಇಳಿಕೆ ಮಾಡುವ ಬಗ್ಗೆ ಮಾತುಗಳನ್ನಾಡಿದರು.

DV Sadananda Gowda takes charge as the Minister of Chemicals and Fertilizers
Author
Bengaluru, First Published May 31, 2019, 5:27 PM IST

ನವದೆಹಲಿ, (ಮೇ.31): ರೈತರಿಗೆ ಇನ್ನೂ ಕಡಿಮೆ ದರದಲ್ಲಿ ರಸಗೊಬ್ಬರ ಪೂರೈಕೆ ಮಾಡಬೇಕಾದದ ಜವಾಬ್ದಾರಿ ನನ್ನ ಮೇಲಿದೆ.  2022ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಇಟ್ಟುಕೊಂಡಿರುವ‌ ಹಿನ್ನೆಲೆಯಲ್ಲಿ ಕೃಷಿ ಉತ್ಪಾದನಾ ವೆಚ್ಚ ಇಳಿಕೆ ಆಗಬೇಕಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ರಸಗೊಬ್ಬರದ‌ ದರ ಇಳಿಕೆ ಮಾಡಬೇಕಿದ್ದು, ರಸಗೊಬ್ಬರದ ಆಮದು ಕಡಿಮೆ ಮಾಡಿ ದೇಶದಲ್ಲೇ ಉತ್ಪಾದನೆ ಮಾಡುವುದಕ್ಕೆ ಒತ್ತು ನೀಡಲಾಗುವುದು. ಎಂದು ತಿಳಿಸಿದರು.

ಮುಚ್ಚಿರುವ ರಸಗೊಬ್ಬರ ಕಾರ್ಖಾನೆಗಳ‌ ಪುನಶ್ಚೇತನ, ಬೇವು ಲೇಪಿತ ಯೂರಿಯಾದ ಮೂಲಕ ಯೂರಿಯಾದ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಅನಂತ್ ಕುಮಾರ್‌ ಶ್ರಮಿಸಿದ್ದರು ಇದೆ ದಿಟ್ಟ ಹೆಜ್ಜೆಯನ್ನು ಮುಂದುವರಿಸುತ್ತೇನೆ ವಿಶ್ವಾಸ ವ್ಯಕ್ತಪಡಿಸಿದರು.

ಶೇ. 23.30ರಷ್ಟು ಯೂರಿಯಾ ಕೊರತೆಯಿದ್ದು. ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಎಂದರು. 

ಕಳೆದ ಮೋದಿ ಸಂಪುಟದಲ್ಲಿ ದಿವಂಗತ ಅನಂತ್ ಕುಮಾರ್ ಅವರು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದರು. ಇದೀಗ ಈ ಖಾತೆಯನ್ನು ಸದಾನಂದಗೌಡ ಅವರಿಗೆ ನೀಡಲಾಗಿದೆ.

Follow Us:
Download App:
  • android
  • ios