ನವದೆಹಲಿ: ನಕಲಿ ಪದವಿ ಪ್ರಮಾಣ ಪತ್ರ ಒದಗಿಸಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂಕಿವ್ ಬೈಸೋಯಾ ರಾಜೀನಾಮೆ ನೀಡಿದ್ದಾರೆ.

ಅಲ್ಲದೇ ಬೈಸೋಯಾರನ್ನು ವಿದ್ಯಾರ್ಥಿ ಸಂಘಟ ನೆಯಿಂದ ಎಬಿವಿಪಿ ಅಮಾನತುಗೊಳಿಸಿದೆ. 

ನಕಲಿ ಪದವಿ ಪ್ರಮಾಣಪತ್ರ ಒದಗಿಸಿದ್ದಕ್ಕೆ ಎನ್‌ಎಸ್ ಯುಐನಿಂದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಗೂ ಹೈಕೋರ್ಟ್‌ನಲ್ಲಿ ವಿಚಾರಣೆ ನಿಗದಿಯಾಗಿರುವುದರಿಂದ ಒತ್ತಡಕ್ಕೆ ಮಣಿದು ಎಬಿವಿಪಿ ಈ ಕ್ರಮ ಕೈಗೊಂಡಿದೆ. ಬೈಸೋಯಾ ಮೇಲೆ ತಮಿಳುನಾಡು ವಿವಿಯ ನಕಲಿ ಪದವಿ ಪ್ರಮಾಣ ಹೊಂದಿದ ಆಪಾದನೆಯಿದೆ.