ಶ್ರೀನಗರ, [ಫೆ.24]: ದಕ್ಷಿಣ ಕಾಶ್ಮೀರದ ಕುಲ್ಗಾಮಾ ಜಿಲ್ಲೆಯಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಇಂದು [ಭಾನುವಾರ] ಗುಂಡಿನ ಕಾಳಗ ನಡೆದಿದೆ.

ಘಟನೆಯಲ್ಲಿ ಬಿಎಸ್ಎಫ್ ಯೋಧರು ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಹತ್ಯೆಯಾದವರನ್ನ ಜೈಷ್ ಎ ಮೊಹಮದ್ ಸಂಘಟನೆಯ  ಉಗ್ರರು ಎಂದು ತಿಳಿದುಬಂದಿದೆ. 

ಗಡಿಯಲ್ಲಿ ಯುದ್ಧ ಭೀತಿ: ಕಾಶ್ಮೀರಕ್ಕೆ 10ಸಾವಿರ ಯೋಧರ ರವಾನೆ

ಇನ್ನು ಘಟನೆಯಲ್ಲಿ ಒಬ್ಬ ಡಿಎಸ್ಪಿ ಹುತಾತ್ಮರಾಗಿದ್ದರೆ, ಒಬ್ಬ ಯೋಧನಿಗೆ ಗಾಯವಾಗಿದೆ. ಫೆ.14ರಂದು ಪುಲ್ವಾಮಾ ದಾಳಿ ನಡೆದ ದಿನದಿಂದ ಉಗ್ರರನ್ನು ಮಟ್ಯಾಷ್ ಮಾಡಲು ಭಾರತೀಯ ಸೇನೆ ನಿರಂತರ ಕಾರ್ಯಚರಣೆ ಮುಂದುವರಿಸಿದೆ.

ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿಯಾಗಿ ವಿವಿಧ ಪಡೆಯ ಸುಮಾರು10 ಸಾವಿರ ಯೋಧರನ್ನು ರವಾನಿಸಲಾಗಿದೆ.