ವಾಷಿಂಗ್ಟನ್ (ಜ. 12): ಇಷ್ಟು ದಿನ ಅನಿವಾಸಿ ಭಾರತೀಯರು ಅಮೆರಿಕದ ಉದ್ಯೋಗಗಳನ್ನು ಕಬಳಿಸುತ್ತಿದ್ದಾರೆ ಎಂದು ಕೆಂಡ ಕಾರುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಲುವು ಬದಲಿಸಿದ್ದು, ‘ಪ್ರತಿಭಾವಂತ ಐಟಿ ಉದ್ಯೋಗಿಗಳು
ಅಮೆರಿಕದಲ್ಲೇ ನಿಶ್ಚಿಂತೆಯಿಂದ ಉಳಿಯಲು ಅನುಕೂಲವಾಗುವಂತೆ ಎಚ್-1 ಬಿ ವೀಸಾವನ್ನು ಆಕರ್ಷಕಗೊಳಸಲಾಗುವುದು’ ಎಂದಿದ್ದಾರೆ.

ಶುಕ್ರವಾರ ಟ್ವೀಟ್ ಮಾಡಿರುವ ಟ್ರಂಪ್, ‘ಅತಿಹೆಚ್ಚು ನಿಪುಣ ಹಾಗೂ ಕುಶಲ ಉದ್ಯೋಗಿಗಳು ಅಮೆರಿಕದಲ್ಲಿ ಉದ್ಯೋಗ ಅರಸಿ ಬರುವಂತೆ ಪ್ರೇರೇಪಿಸುವ ರೀತಿಯಲ್ಲಿ ಎಚ್-1 ಬಿ ವೀಸಾ ನೀತಿ ಬದಲಿಸುತ್ತೇವೆ’ ಎಂದು ಹೇಳಿದ್ದಾರೆ.