Asianet Suvarna News Asianet Suvarna News

ಹಸಿರು ಬಣ್ಣಕ್ಕೆ ಮೋದಿ ತಿರಸ್ಕಾರ?: ತರೂರ್‌ಗೆ ಆಯ್ತಾ ಸಾಕ್ಷಾತ್ಕಾರ?

ಈ ದೇಶದಲ್ಲಿ ಕೋಟ್ಯಾಂತರ ಜನರಿಗೆ ತೊಡಲು ಬಟ್ಟೆಯಿಲ್ಲ. ಅರೆ ನಗ್ನರಾಗಿ ತಮ್ಮ ಬದುಕಿನ ಬಂಡಿ ಎಳೆಯುತ್ತಿರುವ ಈ ‘ಭಾರತೀಯರ’ ಕುರಿತು ಮಾತನಾಡಬೇಕಾದ, ಚಿಂತಿಸಬೇಕಾದ ರಾಜಕಾರಣಿಗಳು, ಪ್ರಧಾನಿ ನರೇಂದ್ರ ಮೋದಿ ಹಸಿರು ಬಣ್ಣದ ಬಟ್ಟೆ ಯಾಕೆ ತೊಡಲ್ಲ?. ಅವರು ಧರಿಸುವ ಬಟ್ಟೆ ಎಂತದ್ದು? ಎಂಬುದರ ಕುರಿತು ಚಿಂತೆ ಮಾಡುತ್ತಿರುವುದು ನಿಜಕ್ಕೂ ಅಸಹನೀಯ.

Does PM Modi really have aversion to colour green as Shashi Tharoor alleged?
Author
Bengaluru, First Published Aug 7, 2018, 11:23 AM IST

ನವದೆಹಲಿ(ಆ.7): ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರ ಟೋಪಿಯಾಗಲಿ, ಹಸಿರು ಬಣ್ಣದ ಬಟ್ಟೆಯನ್ನಾಗಲಿ ಏಕೆ ಧರಿಸುವುದಿಲ್ಲ?. ಈ ಪ್ರಶ್ನೆ ಇದು ನಾವು ನೀವಲ್ಲ ಕೇಳಿದ್ದು. ಕಾಂಗ್ರೆಸ್ ಸಂಸದ ಶಶಿ ತರೂರ್ ಹೀಗೊಂದು ಪ್ರಶ್ನೆಯನ್ನು ಪ್ರಧಾನಿ ಅವರತ್ತ ತೂರಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನೂ ದೇಶದ ಜನತೆ ಅವರಿಗೆ ನೀಡಿದ್ದಾಗಿದೆ. ಆದರೆ ತರೂರ್ ಆಪಾದಿಸಿದಂತೆ ಪ್ರಧಾನಿ ಮೋದಿ ನಿಜಕ್ಕೂ ಹಸಿರು ಬಣ್ಣದ ಧಿರಿಸು ಧರಿಸುವುದಿಲ್ಲವೇ?. ಮೋದಿ ಅವರಿಗೆ ಹಸಿರು ಬಣ್ಣ ಅಂದರೆ ಇಷ್ಟವಿಲ್ಲವೇ?.

ಎಲ್ಲರಿಗೂ ಗೊತ್ತಿರುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಡ್ರೆಸ್ ಸೆನ್ಸ್ ವಿಶ್ವದ ಗಮನ ಸೆಳೆದಿದೆ. ಮೋದಿ ಅವರ ಸ್ಟೈಲ್‌ನ್ನು ವಿಶ್ವ ಮೆಚ್ಚಿಕೊಂಡಿದೆ. ವಿವಿಧ ಬಣ್ಣಗಳ, ವಿವಿಧ ಡಿಸೈನ್‌ನ ಬಟ್ಟೆಗಳಲ್ಲಿ ಮೋದಿ ವಿಶ್ಚ ವೇದಿಕೆಗಳಲ್ಲಿ ಕಂಗೊಳಿಸಿದ್ದಾರೆ. ಅದರಲ್ಲಿ ಹಸಿರೂ ಬಣ್ಣವೂ ಒಂದು ಎಂಬುದು ಇಡೀ ದೇಶಕ್ಕೆ ಗೊತ್ತಿರುವ ಸಂಗತಿ. ತರೂರ್ ಒಬ್ಬರನ್ನು ಬಿಟ್ಟು.

ಗುಜರಾತ್ ರಾಜಧಾನಿ ಅಹಮದಾಬಾದ್‌ನ ಚೌಹಾಣ್ ಬದ್ರರ್ಸ್ ಮೋದಿ ಅವರ ಕಾಸ್ಟ್ಯೂಮ್ ಡಿಸೈನರ್ಸ್ ಎಂಬುದು ಬಹುತೇಕರಿಗೆ ಗೊತ್ತಿರದ ಸಂಗತಿ. ಚೌಹಾಣ್ ಸಹೋದರರು ತಯಾರಿಸುವ ಬಟ್ಟೆಗಳೆಂದರೆ ಮೋದಿ ಅವರಿಗೆ ಬಲು ಪ್ರೀತಿ. ಇದೇ ಕಾರಣಕ್ಕೆ ಮೋದಿ ಯಾವಾಗಲೂ ಚೌಹಾಣ್ ಸಹೋದದರರು ತಯಾರಿಸಿದ ಬಟ್ಟೆಯನ್ನೇ ಧರಿಸುತ್ತಾರೆ.

ಚೌಹಾಣ್ ಸಹೋದರರು ಹೇಳುವಂತೆ ಮೋದಿ ಕಡು ಕಪ್ಪು ಮತ್ತು ಕಡು ಹಸಿರು ಬಣ್ಣದ ಬಟ್ಟೆಗಳನ್ನು ಇಷ್ಟಪಡುವುದಿಲ್ಲ. ಆದರೆ ಸಾಧಾರಣ ಕಪ್ಪು ಅಮತ್ತು ಸಾಧಾರಣ ಹಸಿರುವ ಬಣ್ಣವೆಂದರೆ ಮೋದಿ ಅವರಿಗೆ ಇಷ್ಟ ಎಂಬುದು ಚೌಹಾಣ್ ಬ್ರದರ್ಸ್ ಸ್ಪಷ್ಟ ನುಡಿ.

ಅದರಂತೆ ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರನ್ನು ಬಹುತೇಕ ಬಾರಿ ಸಾರ್ವಜನಿಕವಾಗಿ ಹಸಿರುವ ಬಣ್ಣದ ಬಟ್ಟೆಯಲ್ಲಿ ದೇಶದ ಜನತೆ ನೋಡಿದ್ದಾರೆ. ಪ್ರಮುಖವಾಗಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ಹಲವು ಬಾರಿ ಹಸಿರು ಬಣ್ಣದ ಬಟ್ಟೆ ತೊಟ್ಟಿರುವ ಉದಾಹರಣೆ ಇದೆ. ಅಲ್ಲದೇ ಪ್ರಚಾರ ಚಿತ್ರಗಳಲ್ಲೂ ಮೋದಿ ಹಸಿರುವ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

Does PM Modi really have aversion to colour green as Shashi Tharoor alleged?

ಪ್ರಧಾನಿಯಾದ ಬಳಿಕ ವಿದೇಶಗಳಿಗೆ ಭೇಟಿಯಾದಾಗಲೂ ಪ್ರಧಾನಿ ಹಸಿರು ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದುಂಟು. ಪ್ರಮುಖವಾಗಿ 2015ರಲ್ಲಿ ಮಲೇಶಿಯಾಗೆ ಭೇಟಿ ನೀಡಿದ್ದ ಮೋದಿ, ಮಲೇಶಿಯಾದ ಅಂದಿನ ಪ್ರಧಾನಿ ನಿಜಾಬ್ ರಜಾಕ್ ಏರ್ಪಡಿಸಿದ್ದ ಔತಣಕೂಟದಲ್ಲಿ ಅಲ್ಲಿನ ಸಾಂಪ್ರದಾಯಿಕ ಬಟ್ಟೆಯಲ್ಲಿ ಪಾಲ್ಗೊಂಡಿದ್ದರು. ಅದೂ ಕೂಡ ಹಸಿರು ಬಣ್ಣದ್ದಾಗಿತ್ತು.

ಹೀಗೆ ಪ್ರಧಾನಿ ಮೋದಿ ಹಸಿರು ಬಣ್ಣದ ಉಡುಗೆ ತೊಟ್ಟಿದ್ದರೂ, ಪ್ರಧಾನಿ ಅವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಭರದಲ್ಲಿ ತರೂರ್ ಮೋದಿ ಹಸಿರು ಬಣ್ಣದ ಬಟ್ಟೆಯನ್ನೇ ಧರಿಸುವುದಿಲ್ಲ ಎಂದು ಹೇಳಿ ಲೇವಡಿಗೆ ಗುರಿಯಾಗಿದ್ದಾರೆ.

Follow Us:
Download App:
  • android
  • ios