Asianet Suvarna News Asianet Suvarna News

ಮೈತ್ರಿ ಸರ್ಕಾರದಲ್ಲಿ ಕುಮಾರಣ್ಣನಿಗೆ ದಿಗ್ಬಂಧನ?

ಮೈತ್ರಿ ಸರ್ಕಾರದಲ್ಲಿ ಕುಮಾರಣ್ಣನಿಗೆ ದಿಗ್ಬಂಧನ?

ಸರ್ಕಾರ ಪೂರ್ಣಾವಧಿ ಪೂರೈಸುವ ಭರವಸೆ ಇಲ್ಲವೇ?

ಸಿಎಂಗೆ ಕಾಂಗ್ರೆಸ್ ನಾಯಕರ ಕಾಟ ಜಾಸ್ತಿಯೇ?   

ಬೆಂಗಳೂರು[(ಜೂ.19): ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಒಂದು ರೀತಿಯ ದಿಗ್ಬಂಧನದಲ್ಲಿ ಇದ್ದಂತೆ ವರ್ತಿಸುತ್ತಿದ್ದಾರೆ. ತಾವು ಕಾಂಗ್ರೆಸ್ ಕೃಪಾಕಟಾಕ್ಷದಿಂದ ಸಿಎಂ ಆಗಿದ್ದಾಗಿ ಪದೇ ಪದೇ ಹೇಳುತ್ತಿರುವ ಅವರು, ತಾವೆಷ್ಟು ದಿನ ಸಿಎಂ ಆಗಿ ಮುಂದುವರೆಯುತ್ತೇನೋ ಗೊತ್ತಿಲ್ಲ ಎಂದೇ ಹೇಳುತ್ತಿದ್ದಾರೆ.

ದೋಸ್ತಿ ಸರ್ಕಾರದಲ್ಲಿ ಎಲ್ಲವೂ ಸರಿಯಲ್ಲ ಎಂಬುದು ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಕೇಳಿ ಬರುತ್ತಿರುವ ಮಾತು. ಇದಕ್ಕೆ ಹಾಲಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡುವಿನ ಪ್ರತಿಷ್ಠೆ ಕಾರಣ ಅಂತಾ ಕೆಲವರು ಹೇಳುತ್ತಿದ್ದರೆ ಇನ್ನೂ ಕೆಲವರು ಕಾಂಗ್ರೆಸ್ ಸಚಿವ ಡಿಕೆ ಶಿವಕುಮಾರ್ ಮತ್ತು ಜೆಡಿಎಸ್ ಸಚಿವ ಹೆಚ್.ಡಿ. ರೇವಣ್ಣ ನಡುವಿನ ಗುದ್ದಾಟ ಕಾರಣ ಅಂತಾ ಹೇಳುತ್ತಿದ್ದಾರೆ.

ಹಾಗಾದರೆ ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ಅವರಿಗೆ ದಿಗ್ಬಂಧನದ ಅನುಭವವಾಗುತ್ತಿದೆಯೇ?. ತಿಳಿಯಲು ಈ ವಿಡಿಯೋ ನೋಡಿ..

Video Top Stories