ಜಯಲಲಿತಾ ಬಗ್ಗೆ ಹೊರಬಿತ್ತು ಹೊಸ ಸಂಗತಿ

First Published 12, Jul 2018, 9:59 AM IST
Doctor Reveal onther Matter About Jayalalitha
Highlights

ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವಿನ ಬಗ್ಗೆ ಇದೀಗ ಮತ್ತೊಂದು ಹೊಸ ಸಂಗತಿ ಹೊರ ಬಿದ್ದಿದೆ. 

ಚೆನ್ನೈ: ಆರೋಗ್ಯ ಸುಧಾರಣೆ ದೃಷ್ಟಿಯಿಂದ ತೂಕ ಇಳಿಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ಮಾಡಿದ್ದರೂ, ಆ ಸರ್ಜರಿಗೆ ಒಳಪಡಲು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ನಿರಾಕರಿಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. 

ಜಯಲಲಿತಾ ಸಾವಿನ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾ. ಆರ್ಮುಗಸ್ವಾಮಿ ಆಯೋಗದ ಎದುರು ಹಾಜರಾದ ಮಧುಮೇಹ ತಜ್ಞೆ ಡಾ. ಜಯಶ್ರೀ ಗೋಪಾಲ್‌ ಅವರು ಈ ವಿಷಯ ತಿಳಿಸಿದ್ದಾರೆ. ತೂಕ ಇಳಿಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಸುಲಭವಾಗಿ ನಡೆದಾಡಬಹುದು. 

ಥೈರಾಯ್ಡ್‌ನಂತಹ ಸಮಸ್ಯೆಗಳನ್ನು ಹೋಗಲಾಡಿಸಬಹುದು ಎಂದು ಜಯಲಲಿತಾ ಅವರಿಗೆ ಸಲಹೆ ಮಾಡಲಾಗಿತ್ತು. ಆದರೆ ಆಹಾರದ ಮೂಲಕವೇ ತೂಕ ಇಳಿಸಿಕೊಳ್ಳುವುದಾಗಿ ಅವರು ತಿಳಿಸಿದ್ದರು. ಅಲ್ಲದೆ ಸಾರ್ವಜನಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ವ್ಯಾಯಾಮ ಮಾಡಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.

loader