ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸುಳಿವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೀಡಿದ್ದಾರೆ. ಕೊರೋನಾ ತುರ್ತು ಲಸಿಕೆ ಅನುಮತಿಗೆ ಕೇಂದ್ರದ ಸಿದ್ಧತೆ ನಡೆಸುತ್ತಿದೆ. ಕರುನಾಡ ಕ್ರಶ್ ಅಗಿದ್ದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ. ಸತತ 4ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಕೋಡಿ ಶ್ರಿ ಭವಿಷ್ಯ, ವಿರಾಟ್ ಕೊಹ್ಲಿ ಪಡೆಗೆ ಗೆಲುವಿನ ಸಂಭ್ರಮ ಸೇರಿದಂತೆ ನವೆಂಬರ್ 23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಕೊರೋನಾ ಸವಾಲಿನ ನಡುವೆಯೂ ಹರಿದ್ವಾರದಲ್ಲಿ ಕುಂಭಮೇಳ...
ಕೊರೋನಾ ಸವಾಲಿನ ನಡುವೆಯೂ ಕುಂಭಮೇಳ ಆಯೋಜನೆ ಮಾಡಲಾಗುವುದು ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.
ಕೊರೋನಾ ತುರ್ತು ಲಸಿಕೆ ಅನುಮತಿಗೆ ಕೇಂದ್ರದ ಸಿದ್ಧತೆ!...
ಕೊರೋನಾ ವೈರಸ್ ವಿರುದ್ಧದ ಲಸಿಕೆಯ ಮೂರನೇ ಹಂತದ ಪ್ರಯೋಗ ಮುಗಿಯುವ ಮೊದಲೇ ತುರ್ತು ಸಂದರ್ಭಕ್ಕೆಂದು ಲಸಿಕೆಯ ಬಳಕೆಗೆ ಅನುಮತಿ ನೀಡುವ ಸಾಧ್ಯಾಸಾಧ್ಯತೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಬ್ರಿಟನ್‌ನ ಆಕ್ಸ್‌ಫರ್ಡ್ ಸಿದ್ಧಪಡಿಸುತ್ತಿರುವ ‘ಆ್ಯಸ್ಟ್ರಾಜೆನೆಕಾ’ ಲಸಿಕೆಗೆ ಬ್ರಿಟನ್ ಸರ್ಕಾರ ಅನುಮೋದನೆ ನೀಡಿದರೆ ಭಾರತದಲ್ಲೂ ತುರ್ತು ಬಳಕೆಗೆ ಅನುಮೋದನೆ ಲಭಿಸುವ ಸಾಧ್ಯತೆ ಇದೆ.
ಎಸ್‌ಎಂಕೆ ಜೊತೆ ಬೀಗತನ ಬೆಳೆಸುತ್ತಿರುವ ಬೆನ್ನಲ್ಲೇ ಸುಳಿವು: ಬಿಜೆಪಿ ಸಚಿವರು ಕೈಗೆ ಬರ್ತಾರೆಂದ ಡಿಕೆಶಿ...
ಶೀಘ್ರವೇ ಬಿಜೆಪಿ ಸಚಿವರು ಕೆಲವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ. ಅವರ ಜೊತೆಗೆ ನಾಯಕರು ಬರ್ತಿದ್ದಾರೆ ಎಂದಿದ್ದಾರೆ.
ಅಭ್ಯಾಸ ಪಂದ್ಯ: ರಾಹುಲ್ ಪಡೆಯೆದುರು ವಿರಾಟ್ ಕೊಹ್ಲಿ ತಂಡಕ್ಕೆ ಭರ್ಜರಿ ಗೆಲುವು...
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಭಾನುವಾರ ಅಭ್ಯಾಸ ಪಂದ್ಯವನ್ನಾಡಿದೆ. ಈ ಪಂದ್ಯದಲ್ಲಿ ವಿರಾಟ್ ಪಡೆ ಭರ್ಜರಿ ಗೆಲುವು ದಾಖಲಿಸಿದೆ.
ಕರುನಾಡ ಕ್ರಶ್ ಅಗಿದ್ದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್!...
ದಕ್ಷಿಣ ಭಾರತದ ಸುಂದರಿ ರಶ್ಮಿಕಾ ಮಂದಣ್ಣ ಹೆಸರು ಅದೆಷ್ಟೋ ಹುಡುಗರ ಹೃದಯದಲ್ಲಿ ಅಚ್ಚಾಗಿದೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಹಾಗೂ ಸ್ಟೇಟ್ ಕ್ರಶ್ ಆಗಿದ್ದ ರಶ್ಮಿಕಾ ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ.
ವರ್ಷ ಮುಗಿಯುವಾಗ ಆಘಾತದ ವಿಚಾರ ನುಡಿದರು ಕೋಡಿ ಶ್ರೀ : ಅವರ ಭವಿಷ್ಯದಲ್ಲೇನಿದೆ..?...
2020 ಅತ್ಯಂತ ಭಯಾನಕ ವರ್ಷ ಮುಗಿಯುತ್ತಿದೆ. ಈ ಸಂದರ್ಭದಲ್ಲಿ ಕೋಡಿ ಮಠದ ಸ್ವಾಮೀಜಿಗಳು ಮುಂದಿನ ಭವಿಷ್ಯವನ್ನು ನುಡಿದಿದ್ದಾರೆ. ಅವರ ಭವಿಷ್ಯದಲ್ಲೇನಿದೆ..?
Streamfest: ಡಿ.5ರಿಂದ 6ರವರೆಗೆ ಉಚಿತವಾಗಿ ನೆಟ್‌ಫ್ಲಿಕ್ಸ್ ನೋಡಿ!...
ಭಾರತದ ಜನಪ್ರಿಯ ಸ್ಟ್ರೀಮಿಂಗ್ ಆಪ್‌ಗಳ ಪೈಕಿ ಒಂದಾಗಿರುವ ನೆಟ್‌ಫ್ಲಿಕ್ಸ್ 48 ಗಂಟೆಗಳ ಕಾಲ ಉಚಿತ ಸ್ಟ್ರೀಮ್‌ಫೆಸ್ಟ್ ಪ್ಲ್ಯಾನ್ ಆರಂಭಿಸಿದೆ. ಬಳಕೆದಾರರು ಯಾವುದೇ ಸಬ್ಸ್‌ಕ್ರಿಪ್ಷನ್ ಮಾಡದೇ ನೆಟ್‌ಫ್ಲಿಕ್ಸ್‌ನ ಎಲ್ಲ ಕಂಟೆಂಟ್ ವೀಕ್ಷಿಸಬಹುದಾಗಿದೆ. ಈ ಉಚಿತ ಸ್ಟ್ರೀಮಿಂಗ್ ಡಿ.5ರಿಂದ 6ರವರೆಗೆ ಸಿಗಲಿದೆ.
ಸತತ 4ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!...
ಭಾರತದಲ್ಲೀಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಆತಂಕ ಶುರುವಾಗಿದೆ. ಕಳೆದೆರಡು ತಿಂಗಳು ಸ್ಥಿರವಾಗಿದ್ದ ಬೆಲೆ ಇದೀಗ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸತತ 4ನೇ ದಿನ ಇಂಧನ ಬೆಲೆ ಏರಿಕೆ ವಿವರ ಇಲ್ಲಿವೆ.
ಕಡಿಮೆ ಬಜೆಟ್‌ನಲ್ಲಿ ಕಾರು ಖರೀದಿಸುವ ಪ್ಲಾನ್ ನಿಮ್ಮದಾಗಿದ್ದರೆ, ಇಲ್ಲಿವೆ 5 ಲಕ್ಷ ರೂ ಒಳಗಿನ ಕಾರು!...
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಪ್ರತಿ ಕುಟುಂಬಕ್ಕೂ ಕಾರಿನ ಅವಶ್ಯಕತೆ ಹೆಚ್ಚಾಗಿದೆ. ಹಾಗಾಂತ ಖರೀದಿ ಅಷ್ಟು ಸುಲಭವಲ್ಲ, ಕಾರಣ ಲಕ್ಷ ಲಕ್ಷ ರೂಪಾಯಿ ನೀಡಿ ಕಾರು ಖರೀದಿ ತುಸು ಪ್ರಯಾಸದ ಕೆಲಸವೇ ಸರಿ. ಆದರೆ ಮಧ್ಯಮ ವರ್ಗದ ಕನಸು ಸಾಕಾರಗೊಳಿಸುವ, ಕಡಿಮೆ ಬಜೆಟ್‌ನಲ್ಲಿ ಲಭ್ಯವಿರುವ ಕಾರುಗಳ ಪಟ್ಟಿ ಇಲ್ಲಿವೆ.
ಇಲ್ಲಿಯೂ ಬಿಜೆಪಿಗೆ ಸಿಗಲಿಗೆ ಆಶೀರ್ವಾದ : ತೇಜಸ್ವಿ ಸೂರ್ಯ ಭರವಸೆ...
ರಾಷ್ಟ್ರೀಯ ಯುವ ಮೋರ್ಚ ಅಧ್ಯಕ್ಷ ತೇಜಸ್ವಿ ಸೂರ್ಯ ತೆಲಂಗಾಣ ಹಾಗೂ ಹೈದ್ರಾಬಾದಿಗೆ ಭೇಟಿ ನೀಡಿದ್ದು ಇಲ್ಲಿಯೂ ಬಿಜೆಪಿ ಗೆಲುವಿನ ಭರವಸೆ ವ್ಯಕ್ತ ಪಡಿಸಿದ್ದಾರೆ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 23, 2020, 5:09 PM IST