ತ್ರಿಶೂರ್(ಡಿ.22): ಓರ್ವ ಜಿಲ್ಲಾಧಿಕಾರಿಗೆ ಏನೆಲ್ಲಾ ಪವರ್ ಇರುತ್ತೆ ನೋಡಿ. ಇಡೀ ಜಿಲ್ಲೆಯ ಜವಾಬ್ದಾರಿ ಹೊತ್ತಿರುವ ಜಿಲ್ಲಾಧಿಕಾರಿ, ಜನರ ಸೇವೆಗೆ ಸದಾ ಕಾರ್ಯೋನ್ಮುಖರಾಗಿರಬೇಕಾಗುತ್ತದೆ.

ಅದರಂತೆ ಕೇರಳದ ತ್ರಿಶೂರ್ ಜಿಲ್ಲಾಧಾಕಾರಿ ಟಿ.ವಿ. ಅನುಪಮಾ ಟೋಲ್ ಪ್ಲಾಜಾ ಬಳಿ ಭಾರೀ ಟ್ರಾಫಿಕ್‌ನಿಂದ ಬಳಲುತ್ತಿದ್ದ ಜನರ ನೆರವಿಗೆ ಧಾವಿಸಿದ್ದು, ತಾವೇ ಖುದ್ದಾಗಿ ಟೋಲ್ ಗೇಟ್ ತೆರದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಇಲ್ಲಿನ ಪಾಲಿಯೆಕ್ಕಾರ್ ಬಳಿ ಇರುವ ಟೋಲ್ ಪ್ಲಾಜಾದಲ್ಲಿ ಭಾರೀ ವಾಹನ ದಟ್ಟಣೆ ಇತ್ತು. ಪರಿಣಾಮವಾಗಿ ಗಂಟೆಗಟ್ಟಲೇ ವಾಹನಗಳು ಟೋಲ್ ಪ್ಲಾಜಾ ಬಳಿ ಕಾಯುವಂತಾಗಿ ಜನ ಪರದಾಡುತ್ತಿದ್ದರು.

ಇದೇ ಮಾರ್ಗವಾಗಿ ಹೋಗುತ್ತಿದ್ದ ಜಿಲ್ಲಾಧಿಕಾರಿ ಟಿ.ವಿ. ಅನುಪಮಾ ಖುದ್ದು ತಮ್ಮ ಕಾರಿನಿಂದ ಇಳಿದು ಟೋಲ್ ಗೇಟ್‌ನ್ನು ಓಪನ್ ಮಾಡಿದ್ದಾರೆ. ಅಲ್ಲದೇ ಇಷ್ಟೊಂದು ವಾಹನ ದಟ್ಟಣೆ ಇದ್ದರೂ ಕ್ರಮ ಕೈಗೊಳ್ಳದ ಟೋಲ್ ಸಿಬ್ಬಂದಿ ಮತ್ತು ಟ್ರಾಫಿಕ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜಧಾನಿ ತಿರುವನಂತಪುರಂನಲ್ಲಿ ಜಿಲ್ಲಾಧಿಕಾರಿಗಳ ಸಭೆ ಮುಗಿಸಿ ವಾಪಸ್ಸಾಗುತ್ತಿದ್ದ ಅನುಪಮಾ, ಟೋಲ್ ಪ್ಲಾಜಾ ಬಳಿ ಸುಮಾರು ೧.೫ ಕಿ.ಮೀ. ಉದ್ದದ ಟ್ರಾಫಿಕ್‌ ಕಂಡು ಸಿಡಿಮಿಡಿಗೊಂಡಿದ್ದರು.