ಹುಡುಗಿ ಪ್ರೀತಿಸಿ ಕೈಕೊಟ್ಟದ್ದಕ್ಕೆ ಶಾಲೆಗೆ ಬೆಂಕಿಯಿಟ್ಟ ಭೂಪ

ಭಗ್ನ ಪ್ತೆಮಿಯೊಬ್ಬ ತಾನು ಕಲಿತ ಶಾಲೆಗೆ ಬೆಂಕಿ ಇಟ್ಟ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದಿದೆ. ಶಾಲೆಯ ಗೊಡೆಯ ಮೆಲೆ ಯುವತಿಯ ಹೆಸರು ಬರೆದ ಉಮೇಶ್ ಎನ್ನುವ ಯುವಕ ತನ್ನ ಪ್ರೀತಿಯನ್ನು ದೂರ ಮಾಡಿದ ಶಾಲೆ ಎಂದು ಬರೆದು ಬೆಂಕಿ ಇಟ್ಟಿದ್ದಾನೆ. ಶಾಲೆಯ ಗೋಡೆ ಮತ್ತು ಕೊಠಡಿಗಳ ಬೋರ್ಡ್ ಮೇಲೆ ಇದು 2015 ಮತ್ತು ಹದಿನಾರನೆ ಸಾಲಿನ ಲವ್ ಸ್ಟೋರಿ ವೀಣಾಳನ್ನ ಶಾಲೆಗೆ ಕರೆಸಿ ಎಂದು ಬರೆದಿದ್ದಾನೆ ‌ಅಷ್ಠೆ ಅಲ್ಲದೆ ತಮ್ಮನ್ನು ಒಂದು ಮಾಡಿ ಅಂತಲೂ ಬರೆದಿದ್ದಾನೆ.ಘಟನೆ ಯಲ್ಲಿ ಶಾಲೆಯ ಕಚೇರಿಯ ಸಾಮಗ್ರಿಗಳ ಮತ್ತು ಕ್ರೀಡಾ ಸಾಮಗ್ರಿ ಸುಟ್ಟು ಕರಕಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Comments 0
Add Comment