Asianet Suvarna News Asianet Suvarna News

ಇದೇನಿದು.. ಮೋದಿ, ಶಾ ಮತ್ತು ರಾಹುಲ್‌ರಿಂದ ರಾಷ್ಟ್ರಕ್ಕೆ ಅಪಮಾನ?

ಅವರು ರಾಷ್ಟ್ರದ ಪ್ರಮುಖ ನಾಯಕರು.. ಒಬ್ಬರು ದೇಶದ ಪ್ರಧಾನಿ, ಇನ್ನಿಬ್ಬರು ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರು. ಆದರೆ ಇವರೆಲ್ಲರಿಂದಲೂ ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರಾ? ಇದೀಗ ಹೀಗೊಂದು ಪ್ರಶ್ನೆ ಹುಟ್ಟುಕೊಂಡಿದೆ.

Did PM Narendra Modi and Rahul Gandhi Disrespect the National Anthem?
Author
Bengaluru, First Published Aug 18, 2018, 11:19 AM IST

ನವದೆಹಲಿ[ಆ.18] ಕೆಳಗಿನ ಟ್ವೀಟ್ ಗಳು ಮೋದಿ, ಅಮಿತ್ ಶಾ ಮತ್ತು ರಾಹುಲ್ ಗಾಂಧಿ ವಿವಿಧ ಸಂದರ್ಭದಲ್ಲಿ ನಡೆದುಕೊಂಡ ರೀತಿಯನ್ನು ಹೇಳುತ್ತವೆ. ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ರಾಷ್ಟ್ರಗೀತೆಗೆ ಅವಮಾನ ಆಗಿದೆ ಎಂಬ ಆರೋಪ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿದೆ.

ಯಾವ ಯಾವ ಸಂದರ್ಭದಲ್ಲಿ ನಾಯಕರಿಂದ ಅಚಾತುರ್ಯ ಆಗಿದೆ?

1. ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನ ಭಾಷಣ ಮಾಡುತ್ತಿದ್ದ ಮೋದಿ ಸುಧಾರಿಸಿಕೊಳ್ಳಲು ನೀರು ಕುಡಿದಿದ್ದರು. ಆದರೆ ಇದೇ ವೇಳೆ ರಾಷ್ಟ್ರಗೀತೆಯ ಸಂಗೀತ ಮೊಳಗುತ್ತಿತ್ತು. ಆಮ್ ಆದ್ಮಿ ಪಕ್ಷದ ನಾಯಕರೊಬ್ಬರು ವಿಡಿಯೋ ಒಳಗೊಂಡ ಟ್ವೀಟ್ ಮಾಡಿದ್ದು ಇಡೀ ದೇಶಕ್ಕೆ ರಾಷ್ಟ್ರಭಕ್ತಿಯ ಜ್ಞಾನ ಹೇಳುವವರನ್ನು ಒಮ್ಮೆ ನೋಡಿ ಎಂದು ಟ್ವೀಟ್ ಮಾಡಿದ್ದಾರೆ.
 

2. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅಮಿತ್ ಶಾ ಧ್ವಜಾರೋಹಣ ಮಾಡಲು ಮುಂದಾಗಿದ್ದರು. ಧ್ವಜಾರೋಹಣ ಮಾಡುವಾಗ ಅಮಿತ್ ಶಾ ಧ್ವಜಕ್ಕೆ ಕಟ್ಟಿದ್ದ ಹಗ್ಗ ಎಳೆಯುವಾಗ ಶಾ ಎಡವಟ್ಟು ಮಾಡಿಕೊಂಡಿದ್ದಾರೆ. ಧ್ವಜ ಅನಾವರಣ ಮಾಡುವ ಹಗ್ಗ ಎಳೆಯುವ ಬದಲು ಕೆಳಗೆ ಇಳಿಸಲು ಕಟ್ಟಿದ್ದ ಹಗ್ಗ ಎಳೆದು ಮುಜುಗರಕ್ಕೆ ಗುರಿಯಾಗಿದ್ದಾರೆ.

3. ರಾಜಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಷ್ಟ್ರಗೀತೆ ಮೊಳಗುತ್ತಿದ್ದ ಸಮಯದಲ್ಲಿಯೇ ವೇದಿಕೆಯಲ್ಲಿ ಇತರ ನಾಯಕರೊಂದಿಗೆ ಮಾತನಾಡುತ್ತ ಕಾಲ ಕಳೆಯುತ್ತಿದ್ದರು. ಇದನ್ನು ಬಿಜೆಪಿಯ ನಾಯಕ ಅಮಿತ್ ಮಾಳವೀಯ ಟ್ವೀಟ್ ಮಾಡಿ ಪ್ರಶ್ನೆ ಮಾಡಿದ್ದರು.

Follow Us:
Download App:
  • android
  • ios