ಕಲಬುರಗಿ[ಜ. 25]  ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಮೇಲಿನ ಸಿಬಿಐ ಕೇಸ್ ನಲ್ಲಿ ಕ್ಲಿನ್ ಚೀಟ್ ಸಿಕ್ಕಿದೆ. ಧಾರಾವಾಡ ಸಿಬಿಐ ಸ್ಪೆಷಲ್ ಕೋರ್ಟ್  ಶಾಸಕರಿಗೆ ಕ್ಲೀನ್ ಚೀಟ್ ನೀಡಿದೆ.

ಸಿಬಿಐ ನಿಂದ ಕ್ಲೀನ್ ಚೀಟ್ ಸಿಕ್ಕ ಬಳಿಕ ಶಾಸಕ ರಾಜಕುಮಾರ್ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. 2010 ರಲ್ಲಿ ರಾಜಕೀಯವಾಗಿ ಆರ್ಥಿಕವಾಗಿ ನನ್ನ ತೆಜೋವಧೆ ಮಾಡಿದ್ದರು. ನನ್ನ ಮೇಲೆ ಸಿಬಿಐ ಮುಖಾಂತರ ಸುಳ್ಳು ಕೇಸ್ ದಾಖಲಿಸಲಾಗಿತ್ತು ಎಂದು ಪರೋಕ್ಷವಾಗಿ ಮಾಜಿ ಸಚಿವ ಶರಣಪ್ರಕಾಶ ಪಾಟೀಲ್  ಮೇಲೆ ವಾಗ್ದಾಳಿ ಮಾಡಿದರು.

ನನ್ನ ಮೇಲೆ ದಾಖಲಾಗಿರುವ ಕೇಸ್‌ಗೆ ಸಂಬಂಧಿಸಿ ಸಿಬಿಐ ಕೋರ್ಟ್ ನಲ್ಲಿ ಜಯ ಸಿಕ್ಕಿದೆ. ನಾನು ಯಾವುದೆ ರೀತಿಯಲ್ಲಿ ಭಾಗಿಯಾಗದೆ ಇದ್ದರೂ ಕೂಡ ನನ್ನ ಮೇಲೆ ಸುಳ್ಳು  ಪ್ರಕರಣ ದಾಖಲಿಸಿ ನನ್ನನ್ನು ರಾಜಕೀಯವಾಗಿ ಮುಗಿಸಲು ನೋಡಿದ್ದರು. ಇನ್ನು ಮುಂದೆ ಯಾರ ಮೇಲೂ ಇಂಥ ಕೇಸ್ ದಾಖಲಾಗಬಾರದು. ಈ ಒಂದು ಪ್ರಕರಣದಿಂದ ಕಳೆದ 9 ವರುಷಗಳಿಂದ ಮಾನಸಿಕ ನೋವಾಗಿದೆ ಎಂದರು.