ಮುಂಬೈ(ನ. 29 ) ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಗುರುವಾರದಿಂದಲೇ ಹೊಸ ಮನೆ ಹುಡುಕಲು ಆರಂಭಿಸಿದ್ದಾರೆ. ರಾಜೀನಾಮೆ ಕೊಟ್ಟ ನಂತರ ಸಿಎಂ ಅಧಿಕೃತ ನಿವಾಸ ಖಾಲಿ ಮಾಡುತ್ತಿದ್ದಾರೆ. 

ಸರಕು ಸಾಗಣೆ ವಾಹನವೊಂದು ಸಿಎಂ ಗೃಹ ಕಚೇರಿ ವರ್ಷಾದ ಮುಂದೆ ಬಂದು ನಿಂತಿದ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಹಾರಾಷ್ಟ್ರ ರಾಜಕಾರಣದಲ್ಲಿ ತೀವ್ರ ತೆರನಾದ ಬೆಳವಣಿಗೆಗಳು ನಡೆದಿದ್ದವು. ಈ ಸಾರಿಯ ವಿಧಾನಸಭಾ ಫಲಿತಾಂಶದ ನಂತರ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟಕ್ಕೆ ಮತದಾರರು ಬಹುಮತ ನೀಡಿದ್ದರು. ಆದರೆ ಶಿವಸೇನೆ ನಂತರ ದೋಸ್ತಿಯಿಂದ ಹೊರಬಂದಿತು.

ಎಸ್‌ಬಿಐ ಗೃಹ ಸಾಲದ ನಿಯಮಗಳು ಬದಲಾಗಿವೆ ನೋಡಿ

ಇದಾದ ಮೇಲೆ ಎನ್ ಸಿಪಿಯ ಅಜಿತ್ ಪವಾರ್ ಅವರೊಂದಿಗೆ ಸೇರಿಕೊಂಡ ಬಿಜೆಪಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿತ್ತು. ಆದರೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು.

ದೇವೇಂದ್ರನ ಹಿಂದಿನ ಶಕ್ತಿ ಈ ಅಮೃತಾ

ನಾಗಪುರ ಮೂಲದವರಾಗಿದ್ದರೂ ಫಡ್ನವೀಸ್ ಮುಂಬೈನಲ್ಲಿಯೇ ಉಳಿದುಕೊಳ್ಳುವ ಆಲೋಚನೆ ಮಾಡಿದ್ದು ಮನೆ ಹುಡುಕಾಟ ಮಾಡುತ್ತಿದ್ದಾರೆ. ಫಡ್ನವೀಸ್ ಪತ್ನಿ ಆಕ್ಸಿಸ್ ಬ್ಯಾಂಕ್ ಉದ್ಯೋಗಿ. ಅವರ ಮಗಳು ಸಹ ಮುಂಬೈನಲ್ಲಿಯೇ ವ್ಯಾಸಂಗ ಮಾಡುತ್ತಿದ್ದಾಳೆ.  2014 ರಲ್ಲಿ ಫಡ್ನವೀಸ್ ಸಿಎಂ ಆದಾಗ ಕುಟುಂಬ ನಾಗಪುರದಿಂದ ಮುಂಬೈಗೆ ಶಿಫ್ಟ್ ಆಗಿತ್ತು.