ಹುಬ್ಬಳ್ಳಿ: ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಇನ್ನೋವಾ ಕಾರು ತಾಲೂಕಿನ ನೂಲ್ವಿ ಕ್ರಾಸ್‌ ಬಳಿ ಅಪಘಾತವಾಗಿರುವ ಘಟನೆ ಶುಕ್ರವಾರ ನಡೆ​ದಿ​ದೆ. 

ಬೆಳಗಾವಿಯಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಕಂದಕಕ್ಕೆ ಉರು​ಳಿ​ದ್ದು, ವಾಹ​ನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

 ಈ ಸಮಯದಲ್ಲಿ ಕಾರಿನಲ್ಲಿ ಶಾಸಕ ನಾರಾಯಣಸ್ವಾಮಿ ಇರಲಿಲ್ಲ. ಆದರೆ, ಕಾರು ಚಾಲಕನಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾರಾಯಣಸ್ವಾಮಿ ಬೆಂಬಲಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.