ದಿಲ್ಲಿಯಲ್ಲಿನ್ನು ಅನಿಯಮಿತ ವಿದ್ಯುತ್‌ ಕಡಿತಗೊಂಡ್ರೆ ಕಂಪನಿಯಿಂದ ದಂಡ

news/india | Sunday, April 22nd, 2018
Sujatha NR
Highlights

ದೇಶದ ಬಹುತೇಕ ರಾಜ್ಯಗಳಲ್ಲಿ ಅನಿಯಮಿತ ಮತ್ತು ಸುದೀರ್ಘ ಅವಧಿಯ ವಿದ್ಯುತ್‌ ಕಡಿತ ಸಾಮಾನ್ಯ ವಿಷಯ. ಬಹುತೇಕ ಸಂದರ್ಭಗಳಲ್ಲಿ ವಿದ್ಯುತ್‌ ಸರಬರಾಜು ಕಂಪನಿಗಳು ಈ ಕುರಿತು ಯಾವುದೇ ಹೊಣೆ ಹೊತ್ತುಕೊಳ್ಳುವುದೇ ಇಲ್ಲ

ನವದೆಹಲಿ: ದೇಶದ ಬಹುತೇಕ ರಾಜ್ಯಗಳಲ್ಲಿ ಅನಿಯಮಿತ ಮತ್ತು ಸುದೀರ್ಘ ಅವಧಿಯ ವಿದ್ಯುತ್‌ ಕಡಿತ ಸಾಮಾನ್ಯ ವಿಷಯ. ಬಹುತೇಕ ಸಂದರ್ಭಗಳಲ್ಲಿ ವಿದ್ಯುತ್‌ ಸರಬರಾಜು ಕಂಪನಿಗಳು ಈ ಕುರಿತು ಯಾವುದೇ ಹೊಣೆ ಹೊತ್ತುಕೊಳ್ಳುವುದೇ ಇಲ್ಲ. ಆದರೆ ಇನ್ನು ಮುಂದೆ 1 ಗಂಟೆಗೆ ಹೆಚ್ಚು ಅವಧಿಗೆ ಅನಿಯಮಿತ ವಿದ್ಯುತ್‌ ಕಡಿತವಾದ್ರೆ, ಕಂಪನಿಯೇ ಗ್ರಾಹಕರಿಗೆ ದಂಡ ಪಾವತಿ ಮಾಡುವ ಹೊಸ ನಿಯಮ ದೆಹಲಿಯಲ್ಲಿ ಶೀಘ್ರ ಜಾರಿಗೆ ಬರಲಿದೆ.

ಸಿಎಂ ಕೇಜ್ರಿವಾಲ್‌ ನೇತೃತ್ವದ ದಿಲ್ಲಿ ಸರ್ಕಾರದ ಇಂಥದ್ದೊಂದು ನಿರ್ಧಾರಕ್ಕೆ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ತಮ್ಮ ಅನುಮೋದನೆ ನೀಡಿದ್ದಾರೆ.

ಯೋಜನೆ ಜಾರಿ ಹೇಗೆ?: ಯಾವುದೇ ಒಂದು ಪ್ರದೇಶದಲ್ಲಿ 50ಕ್ಕೂ ಹೆಚ್ಚು ಮನೆಗಳಲ್ಲಿ ಒಮ್ಮೆಗೆ 1 ಗಂಟೆಗಿಂತ ಹೆಚ್ಚಿನ ಅವಧಿಗೆ ಸಕಾರಣವಿಲ್ಲದೆಯೇ, ವಿದ್ಯುತ್‌ ಕಡಿತವಾದರೆ, ಕಂಪನಿಯೇ ಗ್ರಾಹಕರಿಗೆ ದಂಡ ಪಾವತಿಸಲಿದೆ. ವಿದ್ಯುತ್‌ ಕಡಿತಗೊಂಡ 1 ಗಂಟೆಯ ನಂತರದ ಮೊದಲ 1 ಗಂಟೆಗೆ ಕಂಪನಿಗಳು, ಪ್ರತಿ ಗ್ರಾಹಕರಿಗೆ ತಲಾ 50 ರು. ದಂಡ ಪಾವತಿಸಲಿದೆ. ನಂತರದ ಪ್ರತಿ ಗಂಟೆಗೆ ಈ ಮೊತ್ತ 100 ರು.ಗೆ ಹೆಚ್ಚಲಿದೆ. ಈ ಹಣವನ್ನು ಬಿಲ್‌ಗೆ ಹೊಂದಿಸಲಾಗುವುದು.

ಒಂದು ವೇಳೆ ಕಂಪನಿಗಳು ದಂಡ ಪಾವತಿಸದೇ ಇದ್ದಲ್ಲಿ, ಗರಿಷ್ಠ 5000 ಅಥವಾ ದಂಡ ಪಾವತಿಸಬೇಕಾದ ಮೊತ್ತದ 5 ಪಟ್ಟು ಹಣವನ್ನು ದಂಡವಾಗಿ ಕಟ್ಟಬೇಕಾಗುತ್ತದೆ.

ದೆಹಲಿಯಲ್ಲಿ 50 ಲಕ್ಷ ಗೃಹ ಸಂಪರ್ಕ ಮತ್ತು 10 ಲಕ್ಷ ವಾಣಿಜ್ಯ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ.

Comments 0
Add Comment