ನವದೆಹಲಿ :  ದಿಲ್ಲಿಯಲ್ಲಿ ಕಾರು ಕೊಳ್ಳಲು 2019ನೇ ಸಾಲಿನಿಂದ ಒನ್ ಟೈಮ್ ಪಾರ್ಕಿಂಗ್ ಶುಲ್ಕವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭರಿಸಬೇಕಿದೆ.  ಸದ್ಯ ಇರುವ ಶುಲ್ಕಕ್ಕಿಂತ 18 ಪಟ್ಟು ಏರಿಕೆಯಾಗಿದೆ.

ದಿಲ್ಲಿ ಟ್ರಾನ್ಸ್ ಪೋರ್ಟ್  ಇಲಾಖೆ ಮೂರು ಮುನಿಸಿಪಲ್ ಕಾರ್ಪೊರೇಷನ್ಗಳಲ್ಲಿ ಈ ನಿಯಮವನ್ನು ಜಾರಿ ತರುತ್ತಿದೆ.

 ಸದ್ಯ ಪಾರ್ಕಿಂಗ್ ಶುಲ್ಕವು 6 ಸಾವಿರದಿಂದ 75 ಸಾವಿರದವರೆಗೂ ಏರಿಕೆಯಾಗಿದೆ.

ಟ್ರಾನ್ಸ್ ಪೋರ್ಟ್ ಕಮಿಷನರ್  ವರ್ಷ ಜೋಶಿ ಮಾಹಿತಿ ನೀಡಿದ್ದು,  ಜನವರಿ 1, 2019ರಿಂದ ನೂತನ ಪಾರ್ಕಿಂಗ್ ಶುಲ್ಕ ನೀತಿ ಜಾರಿಯಾಗಲಿದೆ ಎಂದು ಹೇಳಿದ್ದಾರೆ. 

ಮುನಿಸಿಪಲ್ ಕಾರ್ಪೊರೇಷನ್  ನೇತೃತ್ವದಲ್ಲಿ ಸಾರಿಗೆ ಇಲಾಖೆ ಶುಲ್ಕವನ್ನು ಸಂಗ್ರಹಿಸುತ್ತದೆ. ವಾಣಿಜ್ಯಿಕ ವಾಹನಗಳಿಗೆ 2500 ರಿಂದ ಆರಂಭವಾಗಿ 25 ಸಾವಿರ ರು.ವರೆಗೆ ಇರಲಿದೆ. 

ಇನ್ನು ಖಾಸಗಿ ಕಾರುಗಳು ಹಾಗೂ ಎಸ್ ಯುವಿ ರೇಂಜ್ ವಾಹನಗಳಿಗೆ  6 ಸಾವಿರದಿಂದ 75 ಸಾವಿರ ವರೆಗೂ ಇರಲಿದೆ ಎಂದು ಜೋಶಿ ತಿಳಿಸಿದ್ದಾರೆ.