Asianet Suvarna News Asianet Suvarna News

ರಾಜೀವ್‌ ಗಾಂಧಿಗೆ ನೀಡಿದ ಭಾರತ ರತ್ನ ವಾಪಸ್‌ ಪಡೆಯಲು ನಿರ್ಣಯ

ಸಿಖ್‌ ವಿರೋಧಿ ದಂಗೆ ಹಿನ್ನೆಲೆಯಲ್ಲಿ ಮಾಜಿ ಪ್ರದಾನಿ ರಾಜೀವ್‌ ಗಾಂಧಿ ಅವರಿಗೆ ಪ್ರದಾನ ಮಾಡಲಾಗಿರುವ ಭಾರತ ರತ್ನ ಗೌರವವನ್ನು ವಾಪಸ್‌ ಪಡೆಯಬೇಕೆಂಬ ನಿರ್ಣಯವನ್ನು ದೆಹಲಿ ವಿಧಾನಸಭೆ ಅಂಗೀಕಾರ ಮಾಡಿದೆ. 

Delhi Assembly Passes Resolution Demanding Rajiv Gandhi Bharat Ratna Be Withdrawn
Author
Bengaluru, First Published Dec 22, 2018, 2:21 PM IST

ನವದೆಹಲಿ: 1984ರ ಸಿಖ್‌ ವಿರೋಧಿ ದಂಗೆ ಹಿನ್ನೆಲೆಯಲ್ಲಿ ಮಾಜಿ ಪ್ರದಾನಿ ರಾಜೀವ್‌ ಗಾಂಧಿ ಅವರಿಗೆ ಪ್ರದಾನ ಮಾಡಲಾಗಿರುವ ಭಾರತ ರತ್ನ ಗೌರವವನ್ನು ವಾಪಸ್‌ ಪಡೆಯಬೇಕೆಂಬ ನಿರ್ಣಯವನ್ನು ದೆಹಲಿ ವಿಧಾನಸಭೆ ಅಂಗೀಕರಿಸಿದೆ. 

ಆಪ್‌ ಶಾಸಕ ಜರ್ನಲ್‌ ಸಿಂಗ್‌ ಅವರು ಮಾಡಿದ ನಿರ್ಣಯವನ್ನು ಶುಕ್ರವಾರದ ದೆಹಲಿ ವಿಧಾನಸಭೆ ಧ್ವನಿ ಮತದ ಮೂಲಕ ಅಂಗೀಕರಿಸಿತು. 

ಭಾರತದ ರಾಜಧಾನಿ ದೆಹಲಿ ಇತಿಹಾಸದಲ್ಲೇ ನಡೆದ ಘನಘೋರ ಮತ್ತು ಅಮಾನವೀಯ ಘಟನೆಯಲ್ಲಿ ಹತ್ಯೆಗೀಡಾದ ಮತ್ತು ಸಂತ್ರಸ್ತರ ಕುಟುಂಬಕ್ಕೆ ಇದುವರೆಗೂ ನ್ಯಾಯ ಸಂದಿಲ್ಲ ಎಂಬ ವಿಚಾರವನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ವಿಚಾರ ಮಂಡಿಸಬೇಕು ಎಂದು ನಿರ್ಣಯದಲ್ಲಿ ಪ್ರತಿಪಾದಿಸಲಾಗಿದೆ.

Follow Us:
Download App:
  • android
  • ios