ಟೈಮ್ಸ್ 100 ಪ್ರಭಾವಿಗಳ ಪಟ್ಟಿಯಲ್ಲಿ ದೀಪಿಕಾ, ಕೋಹ್ಲಿ

Deepika makes it to TIMEs 100 most influential list
Highlights

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಕ್ರಿಕೆಟಿಗ ವಿರಾಟ್ ಕೊಹ್ಲಿ, ಓಲಾ ಸಹ ಸ್ಥಾಪಕ ಭವೀಷ್ ಅಗರ್ವಾಲ್ ಮತ್ತು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಳ್ಲಾ ಅವರು ಪ್ರತಿಷ್ಠಿತ ಟೈಮ್ ನಿಯತಕಾಲಿಕೆ ಪ್ರಕಟಿಸಿರುವ ಈ ವರ್ಷದ 100 ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ನ್ಯೂಯಾರ್ಕ್: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಕ್ರಿಕೆಟಿಗ ವಿರಾಟ್ ಕೊಹ್ಲಿ, ಓಲಾ ಸಹ ಸ್ಥಾಪಕ ಭವೀಷ್ ಅಗರ್ವಾಲ್ ಮತ್ತು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಳ್ಲಾ ಅವರು ಪ್ರತಿಷ್ಠಿತ ಟೈಮ್ ನಿಯತಕಾಲಿಕೆ ಪ್ರಕಟಿಸಿರುವ ಈ ವರ್ಷದ 100 ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸ್ಥಾನ ಪಡೆದಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಥಾನ ಲಭ್ಯವಾಗಿಲ್ಲ. ನಿಯತಕಾಲಿಕೆಯಲ್ಲಿ ದೀಪಿಕಾ ಪಡುಕೋಣೆ ಅವರ ವ್ಯಕ್ತಿಚಿತ್ರಣವನ್ನು ಹಾಲಿವುಡ್ ನಟ ವಿನ್ ಡೀಸೆಲ್ ಬರೆದಿದ್ದಾರೆ. ಓಲಾ ಸಹ ಸ್ಥಾಪಕ ಭಾವಿಷ್ ಅಗರ್ವಾಲ್ ಅವರ ಪ್ರೊಫೈಲ್ ಅನ್ನು ಫ್ಲಿಪ್‌ಕಾರ್ಟ್ ಕಾರ್ಯನಿರ್ವಾಹಕ ಮುಖ್ಯಸ್ಥ ಸಚಿನ್ ಬನ್ಸಲ್ ಬರೆದಿದ್ದರೆ, ವಿರಾಟ್ ಕೊಹ್ಲಿ ಅವರ ವ್ಯಕ್ತಿಚಿತ್ರಣವನ್ನು ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಕಟ್ಟಿಕೊಟ್ಟಿದ್ದಾರೆ.

ತಂಡವನ್ನು ಕೊಹ್ಲಿ ಮುನ್ನಡೆಸಿದ್ದನ್ನು ಇದೇ ಸಂದರ್ಭದಲ್ಲಿ ಸಚಿನ್ ನೆನಪಿಸಿಕೊಂಡಿದ್ದಾರೆ. ಸತ್ಯ ನಾಡೆಳ್ಲಾ ಅವರ ಕುರಿತು ಅಮೆರಿಕ ಸಾಹಿತಿ ವಾಲ್ಟರ್ ಐಸಾಕ್ಸನ್ ಮುನ್ನುಡಿ ಬರೆದಿದ್ದಾರೆ. ಈ ಬಾರಿಯ ಪಟ್ಟಿಯಲ್ಲಿ 45 ಮಹಿಳೆಯರು ಮತ್ತು 40 ವರ್ಷಕ್ಕಿಂತ ಒಳಗಿನ 45 ಜನರು ಸ್ಥಾನ ಪಡೆದಿದ್ದಾರೆ.

loader