ನವದೆಹಲಿ(ಡಿ.12): ದೇಶದ 21 ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿ ಧಾಮಗಳ ಸುತ್ತಲಿನ 10 ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಮಂಗಳವಾರ ನಿರ್ದೇಶಿಸಿದೆ.

ಪಕ್ಷಿಗಳು ಹಾಗೂ ಪ್ರಾಣಿಗಳನ್ನು ಸಂರಕ್ಷಿಸುವ ನಿಟ್ಟಿನಿಂದ ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿ ಧಾಮಗಳ ಸಮೀಪದ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಗುರುತಿಸಿ ಪರಿಸರ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಅಲ್ಲದೇ ಈ ಪ್ರದೇಶಗಲ್ಲಿ ಪರಿಸರಕ್ಕೆ ಮಾರಕವಾಗುವ ಚಟುವಟಿಕೆಗಳನ್ನು ನಿಯಂತ್ರಿಸಲು ಅಧಿಕಾರಿಗಳನ್ನು ನೇಮಿಸುವುದಾಗಿ ಸಚಿವಾಲಯ ತಿಳಿಸಿದೆ. 

ಹೀಗಾಗಿ ಪರಿಸರ ಸೂಕ್ಷ್ಮ ವಲಯದಲ್ಲಿ ಕೆಲವು ಕೈಗಾರಿಕೆಗಳಿಗೆ ಕಾರ್ಯನಿರ್ವಹಿಸದಂತೆ ನಿರ್ದೇಶಿಸಬಹುದಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಜಮ್ಮು- ಕಾಶ್ಮೀರ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್‌, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ 21 ಅಭಯಾರಣ್ಯಗಳು ಪರಿಸರ ಸೂಕ್ಷ್ಮ ವಲಯನ್ನು ಹೊಂದಿಲ್ಲ.