Asianet Suvarna News Asianet Suvarna News

ಮಾಲೂರು ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ ಆರೋಪಿಗೆ ಗಲ್ಲು

ಕೋಲಾರ ಜಿಲ್ಲೆ‌ಯ ಮಾಲೂರು ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಗಲ್ಲು ಶಿಕ್ಷೆಯಾಗಿದೆ. 

Death Sentence to  murder accused by Kolar district court
Author
Kolar, First Published Sep 15, 2018, 5:28 PM IST

ಕೋಲಾರ, (ಸೆ.15): ಕೋಲಾರ ಜಿಲ್ಲೆ‌ಯ ಮಾಲೂರು ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಗಲ್ಲು ಶಿಕ್ಷೆಯಾಗಿದೆ. 

ಸುರೇಶ ಬಾಬು (25)  ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿ. ಆಗಸ್ಟ್ 01 ರಂದು ಸುರೇಶ ಬಾಬು ಎನ್ನುವ ಆರೋಪಿ ಮಾಲೂರಿನ 10ನೇ ತರಗತಿ ವಿದ್ಯಾರ್ಥಿನಿಯನ್ನ ಅಪಹರಿಸಿ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಕೋಲಾರ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಘಟನೆ ನಡೆದು 15 ದಿನಗಳಲ್ಲಿ ಆರೋಪಿಗೆ ಶಿಕ್ಷೆ ನೀಡಿರುವುದು ಜಿಲ್ಲೆಯಲ್ಲಿ ಅತಿ ಕಡಿಮೆ ಅವದಿಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿದ‌ ಮೊದಲ ಪ್ರಕರಣ ಇದಾಗಿದೆ. ಆಗಸ್ಟ್ 01 ರಂದು ಹೋಬಳಿ ಮಟ್ಟದ ಕ್ರೀಡಾಕೂಟ ಮುಗಿಸಿ ಮನೆಗೆ ತೆರಳುತ್ತಿದ್ದ 10 ಬಿಜೆಎಸ್‌ ಶಾಲೆಯ0 ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ ಮಾಲೂರು ರೈಲ್ವೇ ಅಂಡರ್ ಪಾಸ್ ಬಳಿ ಹತ್ಯೆ ಮಾಡಿದ್ದ. ಬಳಿಕ ಪೊಲೀಸರು ಆರೋಪಿಯನ್ನ ಪತ್ತೆ ಮಾಡಿ ಅರೆಸ್ಟ್ ಮಾಡಿದ್ದರು. 

18 ದಿನದಲ್ಲಿ ‌ಮಾಲೂರು ಪೊಲೀಸರಿಂದ 201 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು, ನ್ಯಾಯಾಲಯದಲ್ಲಿ 46 ಜನ ಸಾಕ್ಷಿದಾರರ ವಿಚಾರಣೆ ನಡೆಸಿತ್ತು. ಈ ಪೈಕಿ 33 ಜನ ಆರೋಪಗಳನ್ನು ವಿಚಾರಣೆ ನಡೆಸಿತ್ತು.

Follow Us:
Download App:
  • android
  • ios