ಬೆಂಗಳೂರು (ನ. 07): ನಟ  ದುನಿಯಾ ವಿಜಯ್,  ಪತ್ನಿ ಕೀರ್ತಿಗೌಡ ಸೇರಿದಂತೆ ಏಳು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಗಿರಿನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. 

ಶಾಂತಿ, ಕಾನೂನು ಸುವ್ಯವಸ್ಥೆ ಹದಗಡೆಸಿದ ಆರೋಪದ ಮೇಲೆ ಸಿಆರ್ ಪಿಸಿ 107 ಹಾಕಲಾಗಿತ್ತು. ಆಕ್ಟೊಬರ್ 27 ರಂದು ಸಿಆರ್ ಪಿಸಿ 107 ದಾಖಲಿಸಿಲಾಗಿತ್ತು.  ಈ ಹಿನ್ನಲೆಯಲ್ಲಿ ಪೊಲೀಸರು ನೋಟಿಸ್ ನೀಡಿದ್ದಾರೆ. 

ದುನಿಯಾ ವಿಜಯ್ ಕುಟುಂಬದವರು ಪದೇ ಪದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಸಮಾಜದ ಶಾಂತಿ ಕದಡುತ್ತಿದ್ದಾರೆ ಎಂದು ದುನಿಯಾ ವಿಜಯ್ ಹಾಗೂ ನಾಗರತ್ನ, ಕೀರ್ತಿಗೌಡ ಸೇರಿದಂತೆ ಏಳು ಮಂದಿ ಮೇಲೆ 107 ಸೆಕ್ಷನ್ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ದಕ್ಷಿಣ ವಿಭಾಗ ಡಿಸಿಪಿ ಆಣ್ಣಾಮಲೈ ಎದುರು ದುನಿಯಾ ವಿಜಯ್ ಹಾಗೂ ಇತರರು ಹಾಜರಾಗಿದ್ದಾರೆ. 

ವಿಚಾರಣೆ ನಡೆಸಿದ ಅಣ್ಣಾಮಲೈ ಇದು ಬೆಂಗಳೂರು ಅಥವಾ ಸಾರ್ವಜನಿಕ ಸಮಸ್ಯೆ ಅಲ್ಲ. ಹೀಗಾಗಿ  ದುನಿಯಾ ವಿಜಯ್ ವಿಷಯವಾಗಿ ನಾನು ಮಾತನಾಡುವುದಿಲ್ಲ.   ದುನಿಯಾ ವಿಜಿಯಿಂದ  5 ಲಕ್ಷ ಶ್ಯೂರಿಟಿಯನ್ನ ಬರೆಸಿಕೊಂಡಿದ್ದೀನಿ.  ಮುಚ್ಚಳಿಕೆಯಲ್ಲಿ ಬರೆದುಕೊಟ್ಟಿದ್ದಾರೆ.  ಅವರ ಅಪ್ಪ ಅಮ್ಮನಿಗೆ ವಯಸ್ಸಾಗಿದೆ. ಹೀಗಾಗಿ ಜಸ್ಟ್ ವಾರ್ನಿಂಗ್ ಮಾಡಿದ್ದೇನೆ. ಇನ್ನೊಂದು ಬಾರಿ ಶಾಂತಿ ಕದಡುವಂತ ಕೆಲಸ ಮಾಡಿದರೆ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ವಿಜಯ್ ಗೆ ಅಣ್ಣಾಮಲೈ ಖಡಕ್ ವಾರ್ನಿಂಗ್ ನೀಡಿದ್ದಾರೆ.