ಬಿಜೆಪಿಯು ಮತ್ತೆ ಭರ್ಜರಿ ಗೆಲುವನ್ನೇ ದಾಖಲು ಮಾಡಿದೆ. ಸೋಮವಾರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ.  ಇಲ್ಲಿ ಒಟ್ಟು 59 ವಾರ್ಡಗಳಿಗೆ ನಡೆದ ಚುನಾವಣೆಯಲ್ಲಿ  31ರಲ್ಲಿ ಬಿಜೆಪಿಜಯವನ್ನು ಸಾಧಿಸಿದೆ. 

ದಾವಣಗೆರೆ : ಕರ್ನಾಟಕ ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ.

ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯ ಮೂರು ಮಹಾನಗರ ಪಾಲಿಕೆ ಸೇರಿದಂತೆ 22 ಜಿಲ್ಲೆಗಳಲ್ಲಿ ಚುನಾವಣೆ ನಡೆದಿದೆ. 

ದಾವಣಗೆರೆಯಲ್ಲಿ ಒಟ್ಟು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಸೇರಿ 59 ವಾರ್ಡ್ಗಳಿಗೆ ಚುನಾವಣೆ ನಡೆದಿದೆ. ಇದರಲ್ಲಿ 31 ವಾರ್ಡ್ಗಳಲ್ಲಿ ಬಿಜೆಪಿ ಜಯಗಳಿಸಿದರೆ 19 ವಾರ್ಡ್ಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. 6 ಕಡೆ ಜೆಡಿಎಸ್ ಜಯ ಸಾಧಿಸಿದೆ. 

ಚಿನ್ನಗಿರಿ ಪುರಸಭೆ : 23 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು 10ರಲ್ಲಿ ಬಿಜೆಪಿ ಜಯಗಳಿಸಿದೆ. 10ರಲ್ಲಿ ಕಾಂಗ್ರೆಸ್ ವಿಜಯಿಯಾಗಿದ್ದು 3ರಲ್ಲಿ ಜೆಡಿಎಸ್ ಜಯಗಳಿಸಿದೆ. 

ಹೊನ್ನಾಳಿ ಪಟ್ಟಣ ಪಂಚಾಯಿತಿ : ಇಲ್ಲಿನ 18 ವಾರ್ಡ್ಗಳಿಗೆ ಚುನಾವಣೆ ನಡೆದಿದ್ದು 10ರಲ್ಲಿ ಬಿಜೆಪಿ ಜಯಗಳಿಸಿದರೆ 5 ರಲ್ಲಿ ಕಾಂಗ್ರೆಸ್ ವಿಜಯಿಯಾಗಿದೆ. ಇಲ್ಲಿ ಜೆಡಿಎಸ್ ಫಲಿತಾಂಶ ಶೂನ್ಯ

ಜಗಳೂರು ಪಟ್ಟಣ ಪಂಚಾಯಿತಿ : ಒಟ್ಟು 18 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು 11ರಲ್ಲಿ ಬಿಜೆಪಿ, 4ರಲ್ಲಿ ಕಾಂಗ್ರೆಸ್, 3 ವಾರ್ಡ್ಗಳಲ್ಲಿ ಜೆಡಿಎಸ್ ಜಯ ಸಾಧಿಸಿದೆ. 

ಸ್ಥಳೀಯ ಸಂಸ್ಥೆ ಚುನಾವಣೆಒಟ್ಟು ವಾರ್ಡ್ಬಿಜೆಪಿಕಾಂಗ್ರೆಸ್ಜೆಡಿಎಸ್
ಚನ್ನಗಿರಿ ಪುರಸಭೆ23101003
ಕೊನ್ನಾಳಿ ಪಟ್ಟಣ ಪಂಚಾಯಿತಿ1810500
ಜಗಳೂರು ಪಟ್ಟಣಪಂಚಾಯಿತಿ181143
ಒಟ್ಟು5931196