ನವದೆಹಲಿ(ಜ.26): ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕೇಂದ್ರ ಸರ್ಕಾರ ಈ ಬಾರಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ತಮ್ಮ ಜೀವನದುದ್ದಕ್ಕೂ ದೇಶಕ್ಕಾಗಿ ದುಡಿದ ನಮ್ಮೆಲ್ಲರ ಪ್ರೀತಿಯ 'ಪ್ರಣಬ್ ದಾ' ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ದೊರೆತಿರುವುದು ಸಹಜವಾಗಿಯೇ ಭಾರತೀಯರಿಗೆ ಖುಷಿ ತಂದಿದೆ.

ಆದರೆ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಸಂದಿರುವುದು ಜೆಡಿಎಸ್ ನ ಈ ನಾಯಕನಿಗೆ ಇಷ್ಟವಾದಂತಿಲ್ಲ. ಇದೇ ಕಾರಣಕ್ಕೆ ಮಾಜಿ ರಾಷ್ಟ್ರಪತಿಗೆ ಭಾರತ ರತ್ನ ಏಕೆ ಸಿಕ್ತು ಎಂಬುದಕ್ಕೆ ತಮ್ಮದೇ ಕಾರಣವನ್ನು ಅವರು ಮುಂದಿಟ್ಟಿದ್ದಾರೆ.

ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಘೋಷಣೆ ಮಾಡಲಾಗಿದೆ ಎಂದು ಜೆಡಿಎಸ್ ಮುಖಂಡ ಡ್ಯಾನಿಶ್ ಅಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಾಗ್ಪುರದಲ್ಲಿ ನಡೆದಿದ್ದ ಆರ್‌ಎಸ್ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗಿಯಾಗಿದ್ದು ಮಾತ್ರವಲ್ಲದೇ, ಆರ್‌ಎಸ್ಎಸ್ ಸಂಸ್ಥಾಪಕ ಕೆ.ಬಿ ಹೆಡ್ಗೆವಾರ್ ಅವರನ್ನು ಭಾರತಾಂಬೆಯ ಸುಪುತ್ರ ಎಂದು ಹೊಗಳಿದ್ದರು.

ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ನಮಿಸಲು ಬಂದಿರುವೆ: ಪ್ರಣಬ್ ಮುಖರ್ಜಿ

ಪ್ರಣಬ್ ಮುಖರ್ಜಿ ಅವರ ಈ ಹೊಗಳಿಕೆಯಿಂದಾಗಿ ಕೇಂದ್ರ ಸರ್ಕಾರ ಸಂತುಷ್ಟಗೊಂಡು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಡ್ಯಾನಿಶ್ ಅಲಿ ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಘೋಷಣೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಡ್ಯಾನಿಷ್ ಅಲಿ, 111 ವರ್ಷಗಳ ಕಾಲ ಬದುಕಿ ತ್ರಿವಿಧ ದಾಸೋಹದ ಮೂಲಕ ಸಹಸ್ರಾರು ಜನರ ಬಾಳಿಗೆ ಬೆಳಕಾಗಿದ್ದ ಶಿವಕುಮಾರ ಸ್ವಾಮಿಜಿಗಳನ್ನು ಭಾರತ ರತ್ನಕ್ಕೆ ಆಯ್ಕೆ ಮಾಡಿದಿರುವುದು ಸರ್ಕಾರದ ದುರ್ನಡತೆ ಎಂದು ಟೀಕಿಸಿದ್ದಾರೆ

ಅಲ್ಲದೇ ಪ್ರಸ್ತುತ ಭಾರತ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಭೂಪೇನ್ ಹಜಾರಿಕಾ, ನಾನಾಜಿ ದೇಶ್ ಮುಖ್ ಮತ್ತು ಪ್ರಣಬ್ ಮುಖರ್ಜಿ ಅವರ ಸೇವೆಗಳಿಗಿಂತಲೂ ಶಿವಕುಮಾರ ಸ್ವಾಮಿಜಿಗಳ ಸೇವೆ ಅಮೌಲ್ಯವಾದದ್ದು ಎಂದು ಡ್ಯಾನಿಷ್ ಅಲಿ ಹೇಳಿದ್ದಾರೆ.

ಬಹುತ್ವದ ರಾಷ್ಟ್ರೀಯವಾದ ನಮ್ಮ ಜವಾಬ್ದಾರಿ: ಪ್ರಣಬ್ ಮುಖರ್ಜಿ..!

ಪ್ರಣಬ್ @ಆರ್‌ಎಸ್‌ಎಸ್‌: ರಾಜಕೀಯ ತಲ್ಲಣವೇಕೆ?