ಮುಂಬೈ(ಡಿ.14): ಬೌದ್ಧ ಧರ್ಮದ ಪ್ರಮುಖ ತತ್ವಗಳಲ್ಲಿ ಮಹಿಳಾ ಸಮಾನತೆ ಕೂಡ ಒಂದು. ಪುರುಷ, ಮಹಿಳೆ ಎಂಬ ಬೇಧವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಅಂಶ ಬೌದ್ಧ ಧರ್ಮದ ಮೂಲ ತತ್ವ.

ಇದಕ್ಕೆ ಉದಾಹರಣೆಯಾಗಿ ಭವಿಷ್ಯದಲ್ಲಿ ಮಹಿಳಾ ದಲೈಲಾಮ ಬಂದರೂ ಬರಬಹುದು ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ. 

ಬಾಂಬೆಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾತನಾಡಿದ ದಲೈಲಾಮ, ಭಗವಾನ್ ಬುದ್ದ ಹೆಣ್ಣು ಮತ್ತು ಗಂಡು ಇಬ್ಬರಿಗೂ ಸಮಾನ ಹಕ್ಕು ನೀಡಿದ್ದಾರೆ ಹೀಗಾಗಿ, ಭವಿಷ್ಯದಲ್ಲಿ ಮಹಿಳಾ ದಲೈಲಾಮ ಇರಲಿದ್ದಾರೆ ಎಂದು ಹೇಳಿದರು.

ಮಹಿಳಾ ದಲೈಲಾಮಾ ಏಕಿಲ್ಲ ಎಂದು 15 ವರ್ಷಗಳ ಹಿಂದೆ ಪ್ರೆಂಚ್ ಮ್ಯಾಗಜೀನ್ ಸಂಪಾದಕರು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರವಾಗಿ ಮಹಿಳಾ ದಲೈಲಾಮಾ ಬಂದರೂ ಬರಬಹುದು ಎಂದು ಹೇಳಿದ್ದಾಗಿ ಹಿರಿಯ ಬೌದ್ಧ ಧರ್ಮ ಗುರು ಹೇಳಿದ್ದಾರೆ.

ಬೌದ್ಧ ಧರ್ಮ ಉದಾರವಾದಿಯಾಗಿದೆ ಹೀಗಾಗಿ ಭವಿಷ್ಯದಲ್ಲಿ ಮಹಿಳಾ ಧರ್ಮಗುರು ಬರುವ ಸಾಧ್ಯತೆಯಿದೆ ಎಂದು ದಲೈಲಾಮಾ ಈ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಲೈಲಾಮಾ ಭೇಟಿ ಮಾಡುವುದು ಅಪರಾಧ: ಚೀನಾ ಎಚ್ಚರಿಕೆ

'ನಾವು ಭಾರತದ ನಂಬಿಗಸ್ಥ ಚೇಲಾಗಳು'

ದಲೈಲಾಮಾ ಕಾರ್ಡ್ ಬಳಸಿದರೆ ತಕ್ಕ ಬೆಲೆ : ಭಾರತಕ್ಕೆ ಚೀನಾ ಎಚ್ಚರಿಕೆ