Asianet Suvarna News Asianet Suvarna News

ಅಬಕಾರಿ ಸುಂಕ ಏರಿಕೆ ಪರಿಣಾಮ : ಟೀವಿ, ಮೊಬೈಲ್, ಓವನ್ ದುಬಾರಿ

ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಅಬಕಾರಿ ಸುಂಕ ಹೆಚ್ಚಳ ಮಾಡಿದ ಬೆನ್ನಲ್ಲೇ, ಟೀವಿ, ಮೈಕ್ರೊವೇವ್ ಓವನ್, ಎಲ್‌ಇಡಿ ಬಲ್ಬ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ದುಬಾರಿಯಾಗಲಿದೆ.

Customs duty on TVs phones microwave ovens hiked

ನವದೆಹಲಿ (ಡಿ.20): ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಅಬಕಾರಿ ಸುಂಕ ಹೆಚ್ಚಳ ಮಾಡಿದ ಬೆನ್ನಲ್ಲೇ, ಟೀವಿ, ಮೈಕ್ರೊವೇವ್ ಓವನ್, ಎಲ್‌ಇಡಿ ಬಲ್ಬ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ದುಬಾರಿಯಾಗಲಿದೆ.ಸ್ಥಳೀಯ ಉತ್ಪಾದಕರಿಗೆ ನೆರುವ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಈ ನಿರ್ಧಾರ, ವಿದೇಶದಿಂದ ಆಮದಾದ ಗುಣಮಟ್ಟದ ವಸ್ತುಗಳ ಖರೀದಿಯ ಆಸಕ್ತಿ ಹೊಂದಿದವರ ಜೇಬಿಗೆ ಬಿಸಿ ಮುಟ್ಟಿಸಲಿದೆ.

ಕಳೆದ ವಾರವಷ್ಟೇ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಅನ್ವಯ, ಸಂಪೂರ್ಣ ಆಮದು ಮಾಡಲಾದ ಸಿಬಿಯು (ಸಂಪೂರ್ಣವಾಗಿ ನಿರ್ಮಿತ ಘಟಕಗಳು)ಗಳು ತಮ್ಮ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಲಿದೆ. ಉದಾಹರಣೆಗೆ, ದೇಶೀಯವಾಗಿ ಉತ್ಪಾದಿಸಲಾದ ಟಿವಿಗಳಿಗಿಂತ ಸಂಪೂರ್ಣ ಆಮದು ಮಾಡಲಾದ ಟೀವಿಗೆ ಮೂಲ ಅಬಕಾರಿ ಸುಂಕ ಶೇ.20ರಷ್ಟು ಏರಿಕೆಯಾಗಲಿದೆ.

ಹೀಗಾಗಿ ಆಮದು ಮಾಡಿಕೊಳ್ಳಲಾದ ಎಲ್‌ಇಡಿ ಟೀವಿ ಸೆಟ್‌ಗಳ ಬೆಲೆ ಅವುಗಳ ಗಾತ್ರಗಳಿಗೆ ಅನುಗುಣವಾಗಿ 2000 ರು.ನಿಂದ 10,000 ರು.ವರೆಗೆ ಏರಲಿದೆ. ಮೈಕ್ರೊವೇವ್ ಓವನ್ ವಿಭಾಗದಲ್ಲಿ 400 ರು.ನಿಂದ 500 ರು. ವರೆಗೆ ಬೆಲೆ ಏರಿಕೆಯಾಗಲಿದೆ.

ತೆರಿಗೆ ಹೆಚ್ಚಳ ಬಳಿಕ, ಆ್ಯಪಲ್ ತನ್ನ ವಿವಿಧ ಐಫೋನ್ ಮಾಡೆಲ್‌ಗಳಿಗೆ 3720 ರು. ಏರಿಕೆ ಮಾಡಿದೆ. ಈ ಬಗ್ಗೆ ಆ್ಯಪಲ್ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ ನೂತನ ದರ ನೀತಿ ಪ್ರಕಟಿಸಿದೆ. ಟಿವಿ, ಕ್ಯಾಮೆರಾಗಳು ಸೇರಿದಂತೆ ವೀಡಿಯೊ ರೆಕಾರ್ಡಿಂಗ್ ಉಪಕರಣಗಳ ಅಬಕಾರಿ ಸುಂಕವೂ ಶೇ.10ರಿಂದ ಶೇ.15ಕ್ಕೆ ಏರಿಕೆ ಮಾಡಲಾಗಿದೆ. ಸೆಟ್ ಟಾಪ್ ಬಾಕ್ಸ್‌ಗಳ ಆಮದು ತೆರಿಗೆ ಶೇ.20ರಷ್ಟು ಏರಿಕೆ ಮಾಡಲಾಗಿದೆ.

Follow Us:
Download App:
  • android
  • ios