Asianet Suvarna News Asianet Suvarna News

ಉಗ್ರನಿಂದ RSS ಮುಖಂಡನ ಹತ್ಯೆ

RSS ಮುಖಂಡದ ಹತ್ಯೆ ಬೆನ್ನಲ್ಲೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು-ಸುವ್ಯವಸ್ಥೆ ರಕ್ಷಣೆಗಾಗಿ ಕಿಶ್ತ್’ವಾರ್‌ ಮತ್ತು ಭದರ್‌ವಾಹ್‌ ಜಿಲ್ಲೆಗಳಲ್ಲಿ ಕರ್ಫ್ಯೂ ಘೋಷಣೆ ಮಾಡಲಾಗಿದೆ.

Curfew imposed in Kishtwar after killing of RSS Leader Chandrakant Sharma
Author
Jammu, First Published Apr 10, 2019, 9:27 AM IST

ಜಮ್ಮು[ಏ.10]: ಆರ್‌ಎಸ್‌ಎಸ್‌ ಮುಖಂಡ ಹಾಗೂ ಅವರ ಅಂಗರಕ್ಷಕನ ಮೇಲೆ ಆಸ್ಪತ್ರೆಯಲ್ಲೇ ಉಗ್ರನೋರ್ವ ಗುಂಡಿನ ದಾಳಿ ನಡೆಸಿ, ಅವರನ್ನು ಹತ್ಯೆ ಮಾಡಿದ ಘಟನೆ ಜಮ್ಮು-ಕಾಶ್ಮೀರದ ಕಿಶ್ತ್’ವಾರ್‌ನಲ್ಲಿ ನಡೆದಿದೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಸರ್ಕಾರ ಮತ್ತು ಪೊಲೀಸರ ವಿರುದ್ಧ ಮಂಗಳವಾರ ಪ್ರತಿಭಟನೆ ಕೈಗೊಂಡರು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು-ಸುವ್ಯವಸ್ಥೆ ರಕ್ಷಣೆಗಾಗಿ ಕಿಶ್ತ್’ವಾರ್‌ ಮತ್ತು ಭದರ್‌ವಾಹ್‌ ಜಿಲ್ಲೆಗಳಲ್ಲಿ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಅಲ್ಲದೆ, ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಹೆಚ್ಚಿನ ಭದ್ರತೆಗಾಗಿ ಸೇನೆ ಸಹ ಧಾವಿಸಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

‘ವಾಯುದಾಳಿ ಯೋಧರಿಗೆ’ ನಿಮ್ಮ ಮೊದಲ ಮತ: ಮೋದಿ ಮನವಿ

ಆರೆಸ್ಸೆಸ್‌ ನಾಯಕ ಚಂದರ್‌ಕಾಂತ್‌ ಶರ್ಮಾ ಅವರ ಮೇಲೆ ಚಲನವಲನಗಳ ಮೇಲೆ ನಿಗಾ ವಹಿಸಿದ್ದ ಉಗ್ರ, ಅವರ ಮೇಲೆ ದಾಳಿಗೆ ಯೋಜಿಸಿದ್ದ. ಈ ಪ್ರಕಾರ ಮಂಗಳವಾರ ಮಧ್ಯಾಹ್ನ 12.30ಕ್ಕೆ ಆಸ್ಪತ್ರೆಗೆ ದಾಂಗುಡಿ ಇಟ್ಟ ಉಗ್ರ, ಆರೆಸ್ಸೆಸ್‌ ನಾಯಕ ಚಂದ್ರಕಾಂತ್‌ ಶರ್ಮಾ ಅವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಶರ್ಮಾ ಅವರ ಅಂಗರಕ್ಷಕ ರಾಜೀಂದರ್‌ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಶರ್ಮಾ ಅವರು ವಿಮಾನದ ಮೂಲಕ ಜಮ್ಮು ಆಸ್ಪತ್ರೆಗೆ ರವಾನಿಸಲಾಯಿತು. ಆದಾಗ್ಯೂ, ಶರ್ಮಾ ಅವರು ಸಾವನ್ನಪ್ಪಿದ್ದಾರೆ ಎಂದು ಕಿಶ್ತ್’ವಾರ್‌ ಹಿರಿಯ ಪೊಲೀಸ್‌ ಅಧಿಕಾರಿ ಶಕ್ತಿ ಪಾಠಕ್‌ ತಿಳಿಸಿದರು.

Follow Us:
Download App:
  • android
  • ios