ಚೆನ್ನೈ'ಗೆ ಜಯ: ಧೋನಿ,ರಾಯುಡು ಸ್ಫೋಟಕ ಆಟ, ಸಿಕ್ಸ್'ರ್ ಸಿಡಿಸಿ ಗೆಲ್ಲಿಸಿದ ಕ್ಯಾಪ್ಟ್'ನ್, ಎಬಿಡಿ ಆಟ ವ್ಯರ್ಥ
ಕೂಲ್ ಕ್ಯಾಪ್ಟ್'ನ್ ಧೋನಿ ಕೇವಲ 34 ಚಂಡುಗಳಲ್ಲಿ 7 ಭರ್ಜರಿ ಸಿಕ್ಸ್'ರ್, ಒಂದು ಬೌಂಡರಿಯೊಂದಿಗೆ ಅಜೇಯ 70 ರನ್ ಬಾರಿಸಿದರೆ, ರಾಯುಡು 53 ಎಸೆತಗಳಲ್ಲಿ 8 ಸಿಕ್ಸ್'ರ್ 3 ಬೌಂಡರಿಯೊಂದಿಗೆ 82 ರನ್ ಚಚ್ಚಿದರು. ಬ್ರಾವೋ ಕೂಡ ಕೊನೆಯ ಓವರ್'ನಲ್ಲಿ 1 ಸಿಕ್ಸ್'ರ್ ಹಾಗೂ 1 ಬೌಂಡರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬೆಂಗಳೂರು(ಏ.25): ಕೂಲ್ ಕ್ಯಾಪ್ಟ್'ನ್ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಆರಂಭಿಕ ಆಟಗಾರ ಅಂಬಾಟಿ ರಾಯುಡು ಅವರ ಸ್ಫೋಟಕ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೇಟ್'ಗಳ ಜಯ ಸಾಧಿಸಿದರು.
ಆರ್'ಸಿಬಿ ನೀಡಿದ 205 ರನ್'ಗಳ ಗುರಿಯನ್ನು ರಾಯುಡು, ಧೋನಿ ಕೊನೆಯ ಸಿಡಿಲಬ್ಬರದ ಆಟದಿಂದ 2 ಎಸೆತಗಳಿರುವಂತೆಯೇ ಗೆಲುವಿನ ದಡ ಮುಟ್ಟಿಸಿದರು. ಕೂಲ್ ಕ್ಯಾಪ್ಟ್'ನ್ ಧೋನಿ ಕೇವಲ 34 ಚಂಡುಗಳಲ್ಲಿ 7 ಭರ್ಜರಿ ಸಿಕ್ಸ್'ರ್, ಒಂದು ಬೌಂಡರಿಯೊಂದಿಗೆ ಅಜೇಯ 70 ರನ್ ಬಾರಿಸಿದರೆ, ರಾಯುಡು 53 ಎಸೆತಗಳಲ್ಲಿ 8 ಸಿಕ್ಸ್'ರ್ 3 ಬೌಂಡರಿಯೊಂದಿಗೆ 82 ರನ್ ಚಚ್ಚಿದರು. ಬ್ರಾವೋ ಕೂಡ ಕೊನೆಯ ಓವರ್'ನಲ್ಲಿ 1 ಸಿಕ್ಸ್'ರ್ ಹಾಗೂ 1 ಬೌಂಡರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಎಬಿಡಿ, ಡಿಕಾಕ್ ಆಟ ವ್ಯರ್ಥ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ಸ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬೆಂಗಳೂರು ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು. ಇನಿಂಗ್ಸ್ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ 18 ರನ್ ಗಳಿಸಿ ಠಾಕೂರ್ ಬೌಲಿಂಗ್'ನಲ್ಲಿ ಔಟಾದರು.
ನಂತರ ಶುರುವಾದದ್ದು ಎಬಿಡಿ ಹಾಗೂ ಡಿಕಾಕ್ ಅವರ ಸಿಕ್ಸ್'ರ್'ಗಳ ಅಬ್ಬರ. ಇವರಿಬ್ಬರ ಜೋಡಿ 2ನೇ ವಿಕೇಟ್ ನಷ್ಟಕ್ಕೆ 13.1 ಓವರ್'ಗಳಲ್ಲಿ 138 ರನ್ ಸಿಡಿಸಿದರು. 37 ಎಸತಗಳಲ್ಲಿ 4 ಸಿಕ್ಸ್'ರ್ ಹಾಗೂ 1 ಬೌಂಡರಿಯೊಂದಿಗೆ 53 ರನ್ ಗಳಿಸಿದ ಡಿಕಾಕ್ ಬ್ರಾವೋ ಬೌಲಿಂಗ್'ನಲ್ಲಿ ಔಟಾದರು.
ನಂತರದ ಓವರ್'ನಲ್ಲಿ ಎಬಿಡಿ ತಾಹಿರ್'ಗೆ ವಿಕೇಟ್ ಒಪ್ಪಿಸಿದರು. ಅವರ ಅಮೋಘ ಆಟದಲ್ಲಿ 8 ಭರ್ಜರಿ ಸಿಕ್ಸ್'ರ್ ಹಾಗೂ 2 ಬೌಂಡರಿಗಳಿದ್ದವು. ಕೋರಿ ಆಂಡರ್'ಸನ್ ಕೂಡ ಬಂದ ದಾರಿಯಲ್ಲಿಯೇ ಪೆವಿಲಿಯನ್'ಗೆ ತೆರಳಿದರು. ಮನ್'ದೀಪ್ ಸಿಮಗ್ ಕೂಡ ಒಂದಿಷ್ಟು ಕಾಲ ಅಬ್ಬರಿಸಿದರು. 17 ಚಂಡುಗಳಲ್ಲಿ 3 ಸಿಕ್ಸ್'ರ್ ಹಾಗೂ 1 ಬೌಂಡರಿಯೊಂದಿಗೆ 32 ರನ್ ಬಾರಿಸಿದರು. ಅಂತಿಮವಾಗಿ ಆರ್'ಸಿಬಿ 20 ಓವರ್'ಗಳಲ್ಲಿ 205/8 ರನ್ ಗಳಿಸಿತು. ಚೆನ್ನೈ ಪರ ಬ್ರಾವೋ, ತಾಹಿರ್ ಹಾಗೂ ಠಾಕೂರ್ ತಲಾ 2 ವಿಕೇಟ್ ಪಡೆದರು.
ಸ್ಕೋರ್
ಆರ್'ಸಿಬಿ 20 ಓವರ್'ಗಳಲ್ಲಿ 205/8
(ಎಬಿಡಿ 68, ಡಿಕಾಕ್ 53)
ಚೆನ್ನೈ 19.4 ಓವರ್'ಗಳಲ್ಲಿ 207/5
(ಧೋನಿ ಅಜೇಯ 70,ರಾಯುಡು 82)
ಚೆನ್ನೈ'ಗೆ 5 ವಿಕೇಟ್'ಗಳ ಜಯ
ಪಂದ್ಯ ಪುರುಶೋತ್ತಮ ಎಂ.ಎಸ್. ಧೋನಿ