ಚೀನಾ ಬೇಜವಾಬ್ದಾರಿ ನಡೆಗೆ ಪ್ರಜಾಪ್ರಭುತ್ವ ರಾಷ್ಟ್ರಗಳು ಪಾಠ ಕಲಿಸಲು ಅವಕಾಶ!...

ಚೀನೀ ಕಮ್ಯುನಿಸ್ಟ್ ಪಕ್ಷದ ದುರುದ್ದೇಶದಿಂದಾಗಿ, ಕರೋನಾ ವೈರಸ್ ಪ್ರಪಂಚದಾದ್ಯಂತ ಹರಡಿದೆ. ಈವರೆಗೆ ಈ ಅಪಾಯಕಾರಿ ವೈರಸ್‌ಗೆ 37 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಹಾಗೂ ಜಾಗತಿಕ ಮಟ್ಟದಲ್ಲಿ ಇದು ಬಹಳಷ್ಟು ಹಾನಿಯುಂಟು ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷ ಬೈಡೆನ್‌ಗೆ ನ್ಯಾಯಯುತ, ಪರಿಣಾಮಕಾರಿ ಅಂತರಾಷ್ಟ್ರೀಯ ಮಟ್ಟದ ಪ್ರತಿಕ್ರಿಯೆಯನ್ನು ಮುನ್ನಡೆಸುವ ಅವಕಾಶ ಮತ್ತು ಜವಾಬ್ದಾರಿ ಇದೆ.

ಡೆಲ್ಟಾ, ಬೀಟಾ ವೈರಸ್ ವಿರುದ್ಧ ಕೋವಾಕ್ಸಿನ್ ಪರಿಣಾಮಕಾರಿ ಅಧ್ಯಯನ ವರದಿ!...

ಕೊರೋನಾ ರೂಪಾಂತರಿ ವೈರಸ್ ಡೆಲ್ಟಾ ಹಾಗೂ ಬೇಟಾ ವೈರಸ್ ಅಪಾಯದ ಮಟ್ಟವನ್ನು ಹೆಚ್ಚಿಸಿದೆ. ರೂಪಾಂತರಿ ವೈರಸ್ ತ್ವರಿತವಾಗಿ ಹರಡುವ ಭೀತಿ, ಸೋಂಕಿತರಿಗೆ ತಕ್ಷಣವೇ ಐಸಿಯುು, ವೆಂಟಿಲೇಟರ್ ಅವಶ್ಯತೆ ಹೆಚ್ಚಾಗುತ್ತಿದೆ. ಆದರೆ ಭಾರತ ಆತಂಕ ಪಡುವ ಅವಶ್ಯಕತೆ ಇಲ್ಲ. ಕಾರಣ  ಭಾರತದ ದೇಸಿ ಲಸಿಕೆ ಕೋವಾಕ್ಸಿನ್ ಈ ರೂಪಾಂತರಿ ವೈರಸ್‌ ವಿರುದ್ಧ ಅತ್ಯಂತ ಪರಿಣಾಮಕಾರಿ ಅನ್ನೋದು ಇದೀಗ ಅಧ್ಯಯನ ವರದಿಯಿಂದ ಸಾಬೀತಾಗಿದೆ. 

ಹೊಸ ನಿಯಮದ ವಿರುದ್ಧ ಬೀದಿಗಿಳಿದ ಜನ; ಲಕ್ಷದ್ವೀಪದಲ್ಲಿ ನೀರಿನೊಳಗೆ ಪ್ರತಿಭಟನೆ!...

ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಪುಲ್ ಪಟೇಲ್ ಖೋಡಾ ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ. ಪರಿಣಾಮ ಭಾರಿ ವಿರೋಧ ವ್ಯಕ್ತವಾಗಿದೆ. ಇದೀಗ ಜನ ತಮ್ಮ ತಮ್ಮ ಮನೆ ಮುಂದೆ, ಸಮುದ್ರದೊಳಗೆ ಸೇರಿದಂತೆ ನೀರಿನೊಳಗೆ ಕಪ್ಪು ಬಾವುಟ, ಸೇವ್ ಲಕ್ಷದ್ವೀಪ ಎಂಬ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಉದ್ಯಮಿಗೆ ವಂಚನೆ, ಗಾಂಧೀಜಿ ಮರಿಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆ!...

 ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿ ಆರೋಪದಲ್ಲಿ ಮಹಾತ್ಮ ಗಾಂಧೀಜಿಯವರ 56 ವರ್ಷದ ಮರಿ ಮೊಮ್ಮಗಳಿಗೆ ದಕ್ಷಿಣಾ ಆಫ್ರಿಕಾದ ಡರ್ಬನ್ ನ್ಯಾಯಾಲಯ ಸೋಮವಾರ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇವರು ಆರು ದಶಲಕ್ಷ ಆಫ್ರಿಕನ್ ರಾಂಡ್ (ಅಂದಾಜು 3.22 ಕೋಟಿ) ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಿಶ್ ಲತಾ ರಾಮ್‌ಗೋಬಿನ್ ಅಪರಾಧಿ ಎಂದು ದಕ್ಷಿಣ ಆಫ್ರಿಕಾದ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ.

ಉಚಿತ ಲಸಿಕೆಗೆ 50,000 ಕೋಟಿ ರೂಪಾಯಿ ವ್ಯಯಿಸಲಿದೆ ಕೇಂದ್ರ!...

ಕೊರೋನಾ ವೈರಸ್ ನಿಯಂತ್ರಣಕ್ಕೆ ದೇಶದ ಎಲ್ಲರಿಗೂ ಲಸಿಕೆ ನೀಡುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಚುರುಕುಗೊಳಿಸಿದೆ. ರಾಜ್ಯಗಳ ಪಾಲಿನ ಹೊರೆಯನ್ನು ತಗ್ಗಿಸಿರುವ ಕೇಂದ್ರ ಸರ್ಕಾರ, ಲಸಿಕೆಯನ್ನು ಉಚಿತವಾಗಿ ನೀಡಲಿದೆ ಎಂದಿದೆ. ಉಚಿತ ಲಸಿಕೆ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬರೋಬ್ಬರಿ 50,000 ಕೋಟಿ ರೂಪಾಯಿ ವ್ಯಯಿಸುತ್ತಿದೆ.

ಮೋದಿ ಕಾಲೆಳೆದ ಚಿದಂಬರಂಗೆ, ರಾಹುಲ್ ಪತ್ರ ತೋರಿಸಿ ಧರ್ಮೇಂದ್ರ ಪ್ರಧಾನ್ ಗುದ್ದು!...

ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕೂಡಾ ಈ ಬಗ್ಗೆ ಮೋದಿ ವಿರುದ್ಧ ಕಿಡಿ ಕಾರುತ್ತಾ, ಸರ್ಕಾರ ತನ್ನ ತಪ್ಪುಗಳಿಂದ ಪಾಠ ಕಲಿತಿದೆ ಎಂಬುವುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ. ಆದರೆ ಇದರೊಂದಿಗೆ ಅವರು ಇದೊಂದು ಬಗೆಯ ವಂಚನೆ, ಮೋದಿ ತಪ್ಪುಗಳಿಗೆ ವಿಪಕ್ಷವನ್ನು ಹೊಣೆಗಾರರನ್ನಾಗಿಸುತ್ತಾರೆ ಎಂದೂ ಆರೋಪಿಸಿದ್ದಾರೆ. ಹೀಗಿರುವಾಗ ಅವರ ಈ ಮಾತಿಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿರುಗೇಟು ನೀಡಿದ್ದಾರೆ.

ಗೋಲು ಬಾರಿಸುವುದರಲ್ಲಿ ಲಿಯೋನೆಲ್ ಮೆಸ್ಸಿಯನ್ನೂ ಹಿಂದಿಕ್ಕಿದ ಸುನಿಲ್ ಚೆಟ್ರಿ..!...

ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್‌ ಚೆಟ್ರಿ, ಹಾಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ ಆಟಗಾರರ ಪೈಕಿ ಅಲಿ ಮಬ್ಖೋತ್ ಹಾಗೂ ಲಿಯೋನೆಲ್ ಮೆಸ್ಸಿಯವರನ್ನು ಹಿಂದಿಕ್ಕಿ ಗರಿಷ್ಠ ಗೋಲು ಬಾರಿಸಿದ ಆಟಗಾರರ ಪೈಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ದರ್ಶನ್ ಕರೆಯಿಂದ Zooಗೆ ಹರಿದು ಬಂತು ಭರಪೂರ ನೆರವು!...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿರುವ 9 ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ಕರೆ ನೀಡಿದ್ದರು. ದರ್ಶನ್ ಕರೆಗೆ ಓಗೊಟ್ಟ ಫ್ಯಾನ್ಸ್ ಬರೋಬ್ಬರಿ 40 ಲಕ್ಷಕ್ಕೂ ಹೆಚ್ಚು ಹಣ ದೇಣಿಗೆ ನೀಡಿದ್ದಾರೆ. ಸರ್ಕಾರ ರಾಜ್ಯದ ಹೊಣೆ ಹೊತ್ತರೆ, ದರ್ಶನ್ ಮೃಗಾಲಯದ ಪ್ರಾಣಿಗಳ ರಕ್ಷಣೆಗೆ ಕಾಳಜಿ ವಹಿಸಿದ್ದಾರೆ.

ಕೇಂದ್ರದ ಕಡೇ ಎಚ್ಚರಿಕೆಗೆ ಸೈಲೆಂಟ್‌ ಆದ ಟ್ವಿಟರ್, ಅಧಿಕಾರಿ ನೇಮಿಸಿದ ಫೇಸ್‌ಬುಕ್!...

ಸೋಶಿಯಲ್ ಮೀಡಿಯಾ ನಿಯಮಗಳನ್ನು ಪಾಲಿಸಲು ಹಿಂದೇಟು ಹಾಕುತ್ತಿದ್ದ ಟ್ವಿಟರ್‌ ಸರ್ಕಾರದ ಕಡೇ ಎಚ್ಚರಿಕೆ ಬೆನ್ನಲ್ಲೇ ಯೂಟರ್ನ್ ಹೊಡೆದಿದೆ. ಈ ಸಂಬಂಧ ಉತ್ತರಿಸಿರುವ ಟ್ವಿಟರ್ ತಾನು ಭಾರತದ ಪರ ಸಂಪೂರ್ಣ ಬದ್ಧನಾಗಿದ್ದು, ಮುಂದೆಯೂ ಹೀಗೇ ಇರುವುದಾಗಿ ತಿಳಿಸಿದೆ

ಶೀಘ್ರ​ದಲ್ಲೇ 2 ಸರ್ಕಾ​ರಿ ಬ್ಯಾಂಕ್​ ಖಾಸ​ಗೀ​ಕ​ರ​ಣ!...

ಸಾರ್ವ​ಜನಿಕ ವಲ​ಯದ ಬ್ಯಾಂಕು​ಗಳ ಖಾಸ​ಗೀ​ಕ​ರ​ಣದ ಅಂಗ​ವಾಗಿ ಕೇಂದ್ರ ಸರ್ಕಾರ ಪ್ರಸಕ್ತ ಹಣ​ಕಾಸು ವರ್ಷ​ದಲ್ಲಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಇಂಡಿ​ಯನ್‌ ಓವ​ರ್‌​ಸೀಸ್‌ ಬ್ಯಾಂಕು​ಗ​ಳನ್ನು ಶೀಘ್ರ​ದಲ್ಲೇ ಖಾಸ​ಗೀ​ಕ​ರ​ಣ​ಗೊ​ಳಿ​ಸಲು ಮುಂದಾ​ಗಿದೆ ಎಂದು ಮೂಲ​ಗಳು ತಿಳಿ​ಸಿವೆ.