Asianet Suvarna News Asianet Suvarna News

ಕೊಲೆ ಕೇಸ್‌ನಲ್ಲಿ ಸಿಎಂ ಯೋಗಿಗೆ ಕೋರ್ಟ್‌ ನೋಟಿಸ್‌

ಭದ್ರತಾ ಸಿಬ್ಬಂದಿಯ ಹತ್ಯೆ ಪ್ರಕರಣ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ನೋಟಿಸ್‌ ಜಾರಿ ಮಾಡುವಂತೆ ಸೆಷನ್ಸ್‌ ಕೋರ್ಟ್‌ ಆದೇಶಿಸಿದೆ. 
 

Court Orders Notice Against Uttar Pradesh CM Yogi Adityanath
Author
Bengaluru, First Published Sep 26, 2018, 11:20 AM IST
  • Facebook
  • Twitter
  • Whatsapp

ಲಖನೌ: 19 ವರ್ಷದ ಹಿಂದೆ ಸಮಾಜವಾದಿ ಮುಖಂಡರೊಬ್ಬರ ಭದ್ರತಾ ಸಿಬ್ಬಂದಿಯ ಹತ್ಯೆ ಪ್ರಕರಣ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ನೋಟಿಸ್‌ ಜಾರಿ ಮಾಡುವಂತೆ ಸೆಷನ್ಸ್‌ ಕೋರ್ಟ್‌ ಆದೇಶಿಸಿದೆ. 

ಜೊತೆಗೆ ಪ್ರಕರಣದ ಮರು ವಿಚಾರಣೆಗೂ ಕೋರ್ಟ್‌ ಸೂಚಿಸಿದೆ. ಇದು 2019ರ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿ ಮತ್ತು ಯೋಗಿಗೆ ಮುಜುಗರ ತಂದಿದೆ. 1999ರ ಫೆಬ್ರವರಿಯಲ್ಲಿ ಮಹಾರಾಜಾಗಂಜ್‌ ಜಿಲ್ಲೆಯಲ್ಲಿ ಎಸ್‌ಪಿ ಮುಖಂಡರು ಜೈಲ್‌ಭರೋ ಪ್ರತಿಭಟನೆ ಹಮ್ಮಿಕೊಂಡಿದ್ದರು. 

ಈ ವೇಳೆ ಯೋಗಿ ಆದಿತ್ಯನಾಥ್‌ ನೇತೃತ್ವದ ಗುಂಪು ಹಾರಿಸಿದ ಗುಂಡೇಟಿನಿಂದ ಗೋರಖ್‌ಪುರ ಎಸ್‌ಪಿ ಮುಖಂಡನ ಖಾಸಗಿ ಭದ್ರತಾ ಅಧಿಕಾರಿಯಾಗಿದ್ದ ಸತ್ಯಪ್ರಕಾಶ್‌ ಸಾವನ್ನಪ್ಪಿದ್ದರು.

Follow Us:
Download App:
  • android
  • ios