Asianet Suvarna News Asianet Suvarna News

ಮತ್ತಿನ ಮತ್ತಲ್ಲಿ ಬಿಸಿ ಅಪ್ಪುಗೆಯಲ್ಲಿದ್ದ ಜೋಡಿಗೆ ಕಾದಿತ್ತು ಶಾಕ್!

ತಮ್ಮ ಕಾರಿನಲ್ಲಿ ಪರಸ್ಪರ ಮುತ್ತಿನ ಮಳೆಗರೆಯುತ್ತ, ಬಿಸಿ ಅಪ್ಪುಗೆಯಲ್ಲಿ ಬೆಚ್ಚಗೆ ಕುಳಿತಿದ್ದ ಯುವ ಜೋಡಿಯನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

couple arrested for kissing, cuddling in Islamabad
Author
Bengaluru, First Published Aug 13, 2018, 9:51 PM IST

ಇಸ್ಲಾಮಾಬಾದ್[ಆ.13] ತಮ್ಮ ಕಾರಿನಲ್ಲಿ ಪರಸ್ಪರ ಮುತ್ತಿನ ಮಳೆಗರೆಯುತ್ತ, ಬಿಸಿ ಅಪ್ಪುಗೆಯಲ್ಲಿ ಬೆಚ್ಚಗೆ ಕುಳಿತಿದ್ದ ಯುವ ಜೋಡಿಯನ್ನು ಪೊಲೀಸರು ಬಂಧಿಸಿ ಕರೆದೊಯ್ದಿರುವುದು ಪಾಕಿಸ್ತಾನದಲ್ಲಿ.

18 ರಿಂದ 19 ವರ್ಷದ ಜೋಡಿ ಪೊಲೀಸರ ವಶದಲ್ಲಿದ್ದು ಮೂರು ತಿಂಗಳ ಕಾಲ ಶಿಕ್ಷೆಗೂ ಗುರಿಯಾಗಬಹುದು. ಅಶ್ಲೀಲ ರೀತಿಯಲ್ಲಿ ವ್ಯವಹರಿಸುತ್ತಿದ್ದ ಜೋಡಿಯನ್ನು ಬಂಧಿಸಲಾಗಿದ್ದು ಜೋಡಿಯ ಕೆಟ್ಟ ವರ್ತನೆ ಬಗ್ಗೆ ನಿರಂತ ದೂರು ಇತ್ತು ಎಂದು ಪೊಲೀಸ್ ಅಧಿಕಾರಿ ಜುಲ್ಫಿಕರ್ ಅಹಮದ್ ಹೇಳಿದ್ದಾರೆ.

ಜೋಡಿಯನ್ನು ಇದೀಗ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುವುದನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ.

Follow Us:
Download App:
  • android
  • ios