Asianet Suvarna News Asianet Suvarna News

ಕೊರೋನಾ 3ನೇ ಅಲೆ ವಾರ್ನಿಂಗ್, ಸರಣಿ ಆಯೋಜಿಸಲು BCCI ಪ್ಲಾನಿಂಗ್; ಜೂ.17ರ ಟಾಪ್ 10 ಸುದ್ದಿ!

2 ರಿಂದ 4 ವಾರದಲ್ಲಿ ಭಾರತದಲ್ಲಿ ಕೊರೋನಾ 3ನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಟಾಸ್ಕ್ ಫೋರ್ಸ್ ತಂಡ ಎಚ್ಚರಿಕೆ ನೀಡಿದೆ. ಗಂಗಾ ನದಿಯಲ್ಲಿ ಪೆಟ್ಟಿಗೆಯಲ್ಲಿ ತೇಲಿಬಂದ ಪುಟ್ಟ ಕಂದಮ್ಮನ ಎಲ್ಲಾ ಜವಾಬ್ದಾರಿ ಸರ್ಕಾರ ವಹಿಸಿಕೊಂಡಿದೆ. ಪ್ರಚೋದನಕಾರಿ ಟ್ವೀಟ್, ನಟಿ ಸ್ವರಾ ಭಾಸ್ಕರ್ ಸೇರಿ ಐವರ ವಿರುದ್ಧ ದೂರು ದಾಖಲಾಗಿದೆ. ಏಕಕಾಲದಲ್ಲಿ 2 ಸರಣಿ ಆಯೋಜನೆಗೆ ಬಿಸಿಸಿಐ ಪ್ಲಾನ್, ಯಶ್ ಮುಂದಿನ ಸಿನಿಮಾ ಕುತೂಹಲಕ್ಕೆ ಉತ್ತರ ಸೇರಿದಂತೆ ಜೂನ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Coronavirus 3rd wave to Team India cricket top 10 news of June 17 ckm
Author
Bengaluru, First Published Jun 17, 2021, 5:05 PM IST

ತಾಯಿ ಮಮತೆ ಎದುರು ಸೋತ ಯಮರಾಜ: ಸತ್ತ ಮಗನ ಬದುಕಿಸಿದ ಅಮ್ಮ!...

Coronavirus 3rd wave to Team India cricket top 10 news of June 17 ckm

ಆರು ವರ್ಷದ ಮಗನನ್ನು ವೈದ್ಯರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆಂದು ಘೋಷಿಸಿದ್ದರು. ಪದೇ ಪದೇ ಮರಳಿ ಬಾ ಕಂದ, ನೀನಿಲ್ಲದೇ ನಾನು ಹೇಗೆ ಇರಲಿ ಎಂದಷ್ಟೇ ಹೇಳಿಕೊಂಡಿದ್ದಳು. ಆದರೆ ಅಷ್ಟರಲ್ಲೇ ಚಮತ್ಕಾರ ಒಂದು ನಡೆದಿದ್ದು, ಅತ್ತ ಬಾಲಕನ ದೇಹದಲ್ಲಿ ಚಲನ ವಲನಗಳಾಗಿವೆ. ಇದನ್ನು ಕಂಡು ಎಲ್ಲರೂ ಅಚ್ಚರಿಗೀಡಾಗಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಈ ಬಾಲಕ ಗುಣಮುಖನಾಗಿ ತನ್ನ ತಾಯಿ ಜೊತೆ ಮರಳಿ ಮನೆಗೆ ಬಂದಿದ್ದಾನೆ.

ಗಂಗಾ ನದಿಯಲ್ಲಿ ತೇಲಿಬಂತು ಪೆಟ್ಟಿಗೆ; ತೆರೆದು ನೋಡಿದರೆ ಪುಟ್ಟ ಕಂದಮ್ಮ!...

Coronavirus 3rd wave to Team India cricket top 10 news of June 17 ckm

ಗಂಗಾ ನದಿಯಲ್ಲಿ ದೋಣಿ ಮೂಲಕ ಜೀವ ಸಾಗಿಸುತ್ತಿದ್ದ ದೋಣಿಗಾರನಿಗೆ ಗುಲ್ಲು ಚೌದರಿಗೆ ಅಚ್ಚರಿ ಕಾದಿತ್ತು. ಕಾರಣ ನದಿಯಲ್ಲಿ ಮರದ ಪೆಟ್ಟಿಗೆಯೊಂದು ತೇಲಿ ಬಂದಿದೆ. ಅಲಂಕರಿಸಿದ್ದ ಈ ಪೆಟ್ಟಿಗೆಯತ್ತ ತನ್ನ ದೋಣಿಯನ್ನು ಹುಟ್ಟು ಹಾಕಿ ಹರಸಾಹಸ ಮಾಡಿ ದಡ ಸೇರಿಸಿದ್ದಾನೆ. ಇನ್ನು ಪೆಟ್ಟಿಗೆಯನ್ನು ತೆಗೆದು ನೋಡಿದಾಗ ಪುಟ್ಟ ಕಂದಮ್ಮ ನಿದ್ರಿಸುತ್ತಿದೆ.

2-4 ವಾರದಲ್ಲಿ ಕೊರೋನಾ 3ನೇ ಅಲೆ ಹೊಡೆತ; ಟಾಸ್ಕ್ ಫೋರ್ಸ್ ಎಚ್ಚರಿಕೆ!...

Coronavirus 3rd wave to Team India cricket top 10 news of June 17 ckm

ಕೊರೋನಾ 2ನೇ ಅಲೆ ನಿಯಂತ್ರಿಸಲು ಭಾರತ ಹರಸಾಹಸ ಪಟ್ಟಿದೆ. 2 ತಿಂಗಳಿಗೂ ಹೆಚ್ಚು ಕಾಲ ಲಾಕ್‌ಡೌನ್, ಕಠಿಣ ನಿರ್ಬಂಧ ಸೇರಿದಂತೆ ಹಲವು ನಿಯಮಗಳು ಈಗಲೂ ಇವೆ. ಆದರೂ 2ನೇ ಅಲೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಇದದೀಗ ಇನ್ನು 2 ರಿಂದ 4 ವಾರದಲ್ಲಿ ಕೊರೋನಾ 3ನೇ ಅಲೆ ಅಪ್ಪಳಿಸಲಿದೆ ಎಂದು ಮಹಾರಾಷ್ಟ್ರ ಟಾಸ್ಕ್ ಫೋರ್ಸ್ ತಂಡ ಎಚ್ಚರಿಕೆ ನೀಡಿದೆ.

NIA ದಾಳಿ ಬೆನ್ನಲ್ಲೇ ಎನ್ಕೌಂಟರ್ ಸ್ಪೆಷಲಿಸ್ಟ್ ಶರ್ಮಾ ಅರೆಸ್ಟ್!...

Coronavirus 3rd wave to Team India cricket top 10 news of June 17 ckm

ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಪತ್ತೆಯಾದ ಪ್ರಕರಣ ಹಾಗೂ ಇದೇ ಪ್ರಕರಣಕ್ಕೆ ಸಂಬಂಧಿಸಿದ ಮನ್‌ಸುಖ್ ಹಿರೇನ್ ಕೊಲೆ ಕೇಸ್‌ನ ತನಿಖೆ ನಡೆಸುತ್ತಿರುವ ಎನ್‌ಐಎ, ಮಾಜಿ ACP, ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾರನ್ನು ಬಂಧಿಸಿದೆ. ಜೊತೆಗೆ ಸಾಕ್ಷಿ ಕಲೆ ಹಾಕಲು ಅವರ ಮನೆ ಮೇಲೆ ದಾಳಿ ನಡೆಸಿದೆ.

ಪ್ರಚೋದನಕಾರಿ ಟ್ವೀಟ್, ನಟಿ ಸ್ವರಾ ಭಾಸ್ಕರ್ ಸೇರಿ ಐವರ ವಿರುದ್ಧ ದೂರು!...

Coronavirus 3rd wave to Team India cricket top 10 news of June 17 ckm

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮುಸ್ಲಿಂ ವೃದ್ಧನ ಗಡ್ಡ ಕತ್ತರಿಸಿ ಹಲ್ಲೆ ನಡೆಸಿದ ವಿಚಾರವಾಗಿ ಪೊಲೀಸರು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಿರುದ್ಧ ದೂರು ದಾಖಲಿಸಿದ್ದಾರೆ. 

ಕೋವಿಡ್‌ ಸ್ಥಿತಿ ಹೀಗೇ ಇದ್ದರೆ ಒಟ್ಟಿಗೆ 2 ಸರಣಿ ಆಯೋಜನೆ..!...

Coronavirus 3rd wave to Team India cricket top 10 news of June 17 ckm

 ಮುಂಬರುವ ದಿನಗಳಲ್ಲೂ ಕೋವಿಡ್‌ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಒಂದೇ ಸಮಯದಲ್ಲಿ 2 ಸರಣಿಗಳನ್ನು ಆಯೋಜಿಸುವ ಯೋಜನೆಯನ್ನು ಮುಂದುವರಿಸಲಾಗುತ್ತದೆ ಎಂದು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ತಿಳಿಸಿದ್ದಾರೆ. 

ಯಶ್ ಮುಂದಿನ ಸಿನೇಮಾ ಬಗೆಗಿನ ಕುತೂಹಲಕ್ಕೆ ಇಲ್ಲಿದೆ ಉತ್ತರ? ...

Coronavirus 3rd wave to Team India cricket top 10 news of June 17 ckm

ನರ್ತನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಯಶ್ ನೌಕಾಸೇನೆ ಅಧಿಕಾರಿಯ ಪಾತ್ರ ವಹಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪರಮ ಕೋಪಿಷ್ಠ ವ್ಯಕ್ತಿಯೊಬ್ಬ ಅಧಿಕಾರಿಯಾದರೆ ಏನಾಗುತ್ತದೆ ಎಂಬುದು ಚಿತ್ರದ ಕತೆ ಎನ್ನಲಾಗುತ್ತಿದೆ. ಈ ಬಗ್ಗೆ ನಿರ್ದೇಶಕ ನರ್ತನ್ ಅಥವಾ ಯಶ್ ಅವರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

CAAಗೆ ವಿರೋಧ: ದೆಹಲಿ ದಂಗೆ ಆರೋಪಿಗಳಿಗೆ ಬೇಲ್, ಜೈಲಿನಿಂದ ರಿಲೀಸ್!...

Coronavirus 3rd wave to Team India cricket top 10 news of June 17 ckm

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ 2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರದ ಆರೋಪಿಗಳಾದ ನತಾಶಾ ನರ್ವಾಲ್, ಆಸಿಫ್ ಇಕ್ಬಾಲ್ ತನ್ಹಾ ಹಾಗೂ ದೇವಾಂಗನಾ ಕಾಲಿತಾ ಈ ಮೂವರಿಗೆ ದೆಹಲಿ ಹೈಕೋರ್ಟ್‌ ಜಾಮೀನು ನೀಡಿದೆ. ಕೋರ್ಟ್‌ ಆದೇಶದಂತೆ ಇವರನ್ನು ಇಂದು ಗುರುವಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಈ ಮೂವರ ಮೇಲೆ UAPA ಹೇರಲಾಗಿದೆ

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌: ಚಿನ್ನದ ದರದಲ್ಲಿ ಭಾರೀ ಇಳಿಕೆ!...

Coronavirus 3rd wave to Team India cricket top 10 news of June 17 ckm

ಕೊರೋನಾತಂಕ ನಡುವೆ ಚಿನ್ನದ ಬೇಡಿಕೆ ಕಡಿಮೆ ಇದ್ದರೂ ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಹಳದಿ ಲೋಹದಲ್ಲಿ ಹೂಡಿಕೆ ಮಾಡಿದ್ದರು. ಇದರ ಪರಿಣಾಮವೆಂಬಂತೆ ಬಂಗಾರ ದರ ಮಹಾಮಾರಿ ನಡುವೆಯೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಸದ್ಯ ಚಿನ್ನದ ಬೆಲೆಯಲ್ಲಿ ಏರಿಳಿತವಾಗತೊಡಗಿದ್ದು, ಗ್ರಾಹಕರಲ್ಲೂ ಖರೀದಿಸಬೇಕಾ? ಬೇಡವಾ? ಎಂಬ ಗೊಂದಲದಲ್ಲಿದ್ದರು. ಸದ್ಯ ಕಳೆದೆರಡು ದಿನದಿಂದ ಚಿನ್ನದ ದರ ಇಳಿಕೆ ಕಂಡಿದ್ದು ಗ್ರಾಹಕರನ್ನು ಹಿಗ್ಗುವಂತೆ ಮಾಡಿದೆ.

ಆಧಾರ್‌  ಕಾರ್ಡ್‌ನಲ್ಲಿ ಮುರ್ತಜಾ, ಹೊರ ಲೋಕಕ್ಕೆ ಮೃತ್ಯುಂಜಯ!...

Coronavirus 3rd wave to Team India cricket top 10 news of June 17 ckm

ತನ್ನ ಲಿವ್ ಇನ್ ಸಂಗಾತಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ  ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.  30  ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಮತಾಂತರವಾಗಲು ಒತ್ತಾಯ ಮಾಡುತ್ತಿದ್ದ ಎಂಬ ಸಂಗತಿಯೂ ಬೆಳಕಿಗೆ ಬಂದಿದೆ.

Follow Us:
Download App:
  • android
  • ios