ಅಸರಾಂ'ಗೆ ಶಿಕ್ಷೆಯಾದ ನಂತರ ಕೆಸರೆರಚಾಟ: ಬಾಪು ಕಾರ್ಯಕ್ರಮದಲ್ಲಿ ಮೋದಿ,ಕಾಂಗ್ರೆಸ್ ನಾಯಕರು ಭಾಗಿ !

First Published 25, Apr 2018, 7:00 PM IST
Congress others tweet photo clips of Narendra Modi with Asaram after latter found guilty of raping minor
Highlights

ಕಾಂಗ್ರೆಸ್ ಪಕ್ಷ ಹಾಗೂ ಇತರ ಸಂಬಂಧಿತ ಟ್ವಿಟರ್'ಗಳಲ್ಲಿ ಪ್ರಧಾನಿ ಮೋದಿ ಅವರು ಅಸರಾಂ ಬಾಪು ಅಧ್ಯಕ್ಷತೆ ವಹಿಸಿದ್ದ ವಿಡಿಯೋವನ್ನು ಪೋಸ್ಟ್ ಮಾಡಿ ವಿಧವಿಧವಾದ ಶಿರೋನಾಮೆಯನ್ನು ನೀಡಿದ್ದಾರೆ.

ನವದೆಹಲಿ(ಏ.25): ರಾಜಸ್ಥಾನದ ಜೋಧ್'ಪುರ ನ್ಯಾಯಾಲಯ ಇಂದು ಸ್ವಯಂಘೋಷಿತ ದೇವಮಾನವ ಅಸರಾಂ ಬಾಪುಗೆ ಅಪ್ರಾಪ್ತೆಯೊಬ್ಬಳ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ವಿಧಿಸಿದೆ. ಆದರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕೆಸರೆರಚಾಟದಲ್ಲಿ ತೊಡಗಿವೆ.

 

ಕಾಂಗ್ರೆಸ್ ಪಕ್ಷ ಹಾಗೂ ಇತರ ಸಂಬಂಧಿತ ಟ್ವಿಟರ್'ಗಳಲ್ಲಿ ಪ್ರಧಾನಿ ಮೋದಿ ಅವರು ಅಸರಾಂ ಬಾಪು ಅಧ್ಯಕ್ಷತೆ ವಹಿಸಿದ್ದ ವಿಡಿಯೋವನ್ನು ಪೋಸ್ಟ್ ಮಾಡಿ ವಿಧವಿಧವಾದ ಶಿರೋನಾಮೆಯನ್ನು ನೀಡಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ಪಕ್ಷದ ಟ್ವಿಟರ್ ಖಾತೆಗಳಲ್ಲಿ ಕಾಂಗ್ರೆಸ್'ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಬಾಪು ಬಳಿ ಆಶೀರ್ವಾದ ಪಡೆಯುತ್ತಿರುವ ಭಾವಚಿತ್ರವನ್ನು ಪೋಸ್ಟ್ ಮಾಡಲಾಗಿದೆ.  

 

loader