Asianet Suvarna News Asianet Suvarna News

ಸಂಸದ ವಿ.ಎಸ್. ಉಗ್ರಪ್ಪ ರಾಜೀನಾಮೆ..!

ಬಳ್ಳಾರಿ ಲೋಕಸಭಾದಿಂದ ಗೆದ್ದು ಸಂಸದರಾದ ಕಾಂಗ್ರೆಸ್ ನ ವಿ.ಎಸ್. ಉಗ್ರಪ್ಪ ಅವರು ತಮ್ಮ ಮತ್ತೊಂದು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಾವದು  ಆ ಸ್ಥಾನ?

Congress Leader VS Ugrappa resigns to Karnataka legislative council
Author
Bengaluru, First Published Nov 17, 2018, 2:48 PM IST

ಬೆಂಗಳೂರು, ನ.17: ಕಾಂಗ್ರೆಸ್ ನ ಹಿರಿಯ ನಾಯಕ ವಿ.ಎಸ್ ಉಗ್ರಪ್ಪ ಅವರು ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶ ಮಾಡಿದ್ದಾರೆ.

ಈ ಹಿನ್ನಲೆಯಲ್ಲಿ ಉಗ್ರಪ್ಪ ಅವರು ತಮ್ಮ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು (ಶನಿವಾರ) ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿಯವರಿಗೆ ರಾಜಿನಾಮೆ ನೀಡಿದರು.

ಉಪ ಚುನಾವಣೆ : ಇದು ಬಳ್ಳಾರಿ ಫಲಿತಾಂಶದ ಸೀಕ್ರೇಟ್

ಇತ್ತೀಚೆಗೆ ನಡೆದಿದ್ದ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯನ್ನ ಕಾಂಗ್ರೆಸ್ ಛಿದ್ರಗೊಳಿಸಿದ್ದು, ವಿ.ಎಸ್ ಉಗ್ರಪ್ಪ ದಾಖಲೆ ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ.

 ದಾಖಲೆಯ ಸುಮಾರು 2.5 ಲಕ್ಷ ಮತಗಳಿಂದ ಶ್ರೀರಾಮುಲು ಅವರ ಸಹೋದರಿ ಜೆ. ಶಾಂತ ಅವರನ್ನ ಮಣಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

Follow Us:
Download App:
  • android
  • ios