Asianet Suvarna News Asianet Suvarna News

ಮತ್ತೆ ಲಕ್ಷ್ಮೀ ಬಾಂಬ್ ಆ್ಯಕ್ಟೀವ್: ಬಿಜೆಪಿಯಿಂದ 30 ಕೋಟಿ ರೂ. ಸೂಟಕೇಸ್ ಬಂದಿತ್ತಂತೆ!

Sep 28, 2018, 4:06 PM IST

ಬೆಳಗಾವಿ(ಸೆ.28): ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂಬ ಆರೋಪಕ್ಕೆ ಮತ್ತಷ್ಟು ಪುಷ್ಟಿ ದೊರೆತಿದೆ. ಪಕ್ಷ ತೊರೆಯಲು ಬಿಜೆಪಿ ತಮಗೆ 30 ಕೋಟಿ ರೂ. ಆಮಿಷ ಒಡ್ಡಿದೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊಸ ಬಾಂಬ್ ಸಿಡಿಸಿದ್ದಾರೆ. ತಮ್ಮನ್ನೂ ಸೇರಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಬಿಜೆಪಿ ಆಮಿಷ ಒಡ್ಡುತ್ತಿದ್ದು, ಇದಕ್ಕೆ ತಾವ್ಯಾರು ಬಲಿಯಾಗುವುದಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಅಲ್ಲದೇ ತಮಗೆ ಮಂತ್ರಿಗಿರಿಯನ್ನೂ ನೀಡುವ ಆಮಿಷವನ್ನು ಬಿಜೆಪಿ ಒಡ್ಡಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಆರೋಪವನ್ನು ತಿಸ್ಕರಿಸಿರುವ ಬಿಜೆಪಿ, ಪಕ್ಷದ ಮೇಲೆ ಇಂತಹ ಕೀಳು ಮಟ್ಟದ ಆರೋಪ ಹೊರಿಸಲು ಲಕ್ಷ್ಮೀ ಅವರಿಗೆ ನೈತಿಕತೆ ಎಲ್ಲಿದೆ ಎಂದು ಕಿಡಿಕಾರಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..