ಬೆಂಗಳೂರು (ಮೇ. 08): ನನ್ನ ಮಗಳು ಪಿಯುಸಿ ಫೇಲ್ ಆಗಲು ಕಾಂಗ್ರೆಸ್ ನಾಯಕರು ಕಾರಣ. ನನ್ನ ಮೇಲೆ ಕಾಂಗ್ರೆಸ್ಸಿಗರು ಸುಳ್ಳು ಆರೋಪ ಮಾಡುತ್ತಿರುವ ಸಲುವಾಗಿ ನನ್ನ ಕುಟುಂಬಸ್ಥರು ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಮೇಲೆ ಉಮೇಶ ಜಾಧವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಾನು ಹಣ ತೆಗೆದುಕೊಂಡಿದ್ದೇನೆಂದು ನನ್ನ ಮಗಳ ಕಾಲೇಜಿನಲ್ಲಿ ಅವಳಿಗೆ ಅವಮಾನ ಮಾಡಿದ್ದಾರೆ. ಅದಕ್ಕೆ ‌ಅವಳು ಮಾನಸಿಕವಾಗಿ‌ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾಳೆ.  ಇದಕ್ಕೆ ಕಾಂಗ್ರೆಸ್ ಸುಳ್ಳು ಆರೋಪವೇ ಕಾರಣ ಎಂದು ಉಮೇಶ್ ಜಾಧವ್ ಆರೋಪಿಸಿದ್ದಾರೆ. 

ಇದಕ್ಕೆ ಪ್ರಿಯಾಂಕ್ ಖರ್ಗೆ ಉತ್ತರಿಸುತ್ತಾ,  ಅದು ಅವರ ವೈಯಕ್ತಿಕ ವಿಚಾರ. ಅವರ ಮನೆ ವಿಚಾರದ ಬಗ್ಗೆ ನಾನು ಕಮೆಂಟ್ ಮಾಡುವುದು ಸರಿಯಲ್ಲ. ಅವರಿಗೆ ವಿವೇಕ ಇಲ್ಲ ಆದರೆ ನನಗೆ ವಿವೇಕ ಇದೆ. ರಾಜಕೀಯದಲ್ಲಿ ಎಲ್ಲರಿಗೂ ಒಂದು ಚೌಕಟ್ಟು ಇರುತ್ತೆ ಅದನ್ನು ದಾಟಲು ನಾನು ತಯಾರಿಲ್ಲ ಎಂದು ಹೇಳಿದ್ದಾರೆ. 

"