Asianet Suvarna News Asianet Suvarna News

Priyanka Gandhi Allegations : ನನ್ನ ಮಕ್ಕಳ ಇನ್ಸ್ ಟಾಗ್ರಾಮ್ ಖಾತೆ ಕೂಡ ಹ್ಯಾಕ್ ಆಗಿದೆ!

ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಿಡಿ
ಸರ್ಕಾರದ ವಿರುದ್ಧ ಫೋನ್ ಕದ್ದಾಲಿಕೆ ಆರೋಪ ಮಾಡಿದ ಅಖಿಲೇಶ್ ಯಾದವ್
ಅಖಿಲೇಶ್ ಯಾದವ್ ಗೆ ಸೂಕ್ತ ತಿರುಗೇಟು ನೀಡಿದ್ದ ಯೋಗಿ ಆದಿತ್ಯನಾಥ್
 

Congress General secretary Priyanka Gandhi says her childrens Instagram accounts were hacked san
Author
Bengaluru, First Published Dec 21, 2021, 4:13 PM IST

ಪ್ರಯಾಗ್ ರಾಜ್ (ಡಿ. 21): ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ (Uttar Pradesh Legislative Assembly election) ಘೋಷಣೆಯಾಗುವ ಮುನ್ನವೇ  ಫೋನ್ ಕದ್ದಾಲಿಕೆ (Phone Tapping ) ಆರೋಪ-ಪ್ರತ್ಯಾರೋಪಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಇದರ ನಡುವೆ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ಉತ್ತರ ಪ್ರದೇಶ ( Uttar Pradesh) ಸರ್ಕಾರದ ಮೇಲೆ ಮಂಗಳವಾರ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ತನ್ನ ಮಕ್ಕಳ ಇನ್ಸ್ ಟಾಗ್ರಾಮ್  (Instagram) ಖಾತೆಯನ್ನೂ ಕೂಡ ಉತ್ತರ ಪ್ರದೇಶ ಸರ್ಕಾರ ಹ್ಯಾಕ್ ಮಾಡಿದೆ ಎಂದು ಆರೋಪಿಸಿದ್ದಾರೆ. ಸರ್ಕಾರಕ್ಕೆ ಬೇರೆ ಯಾವುದೇ ಕೆಲಸ ಇಲ್ಲವೆಂದು ಇದನ್ನು ನೋಡಿದರೆ ಸಾಬೀತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಒಟ್ಟಾರೆ ಉತ್ತರ ಪ್ರದೇಶದಲ್ಲಿ ಫೋನ್ ಟ್ಯಾಪಿಂಗ್ ಹಾಗೂ ಹ್ಯಾಕ್ ಎನ್ನುವ ಪದಗಳೇ ಸಾಕಷ್ಟಾಗಿ ಚರ್ಚೆಯಾಗುತ್ತಿವೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav),  ಉತ್ತರ ಪ್ರದೇಶ ಸರ್ಕಾರ ತಮ್ಮ ಫೋನ್ ಅನ್ನು ಟ್ಯಾಪ್ ಮಾಡುತ್ತಿದ್ದು, ಪ್ರತಿ ದಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರೆಕಾರ್ಡಿಂಗ್ ಗಳನ್ನು (Chief Minister Yogi Adityanath) ಕೇಳುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದರು.

"ನಮ್ಮೆಲ್ಲ ಫೋನ್ ಕಾಲ್ ಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ. ಅದರೊಂದಿಗೆ ನಮ್ಮ ಪಕ್ಷದ ಪ್ರತಿ ಫೋನ್ ಕರೆಗಳನ್ನು ಕದ್ದು ಕೇಳಲಾಗುತ್ತಿದೆ. ಸ್ವತಃ ಸಿಎಂ ಯೋಗಿ ಆದಿತ್ಯನಾಥ್ ಪ್ರತಿ ದಿನ ಸಂಜೆಯ ವೇಳೆ ಈ ರೆಕಾರ್ಡಿಂಗ್ ಗಳನ್ನು ಕೇಳುತ್ತಾರೆ. ಹಾಗೇನಾದರೂ ನೀವು (ಪತ್ರಕರ್ತರು) ನಮ್ಮನ್ನು ಸಂಪರ್ಕ ಮಾಡಿದಲ್ಲಿ, ನಿಮ್ಮ ಫೋನ್ ಗಳನ್ನೂ ಸರ್ಕಾರ ಟ್ಯಾಪ್ ಮಾಡುತ್ತದೆ. ಇಲ್ಲಿ ಸರ್ಕಾರ ಎಷ್ಟು ಅನುಪಯೋಗಿ ಎನ್ನುವುದು ನಿಮಗೆ ಇದರಿಂದ ಗೊತ್ತಾಗುತ್ತದೆ' ಎಂದು ಅಖಿಲೇಶ್ ಯಾದವ್ ಹೇಳಿದ್ದರು. ಅಖಿಲೇಶ್ ಯಾದವ್ ಅವರ ಈ ಮಾತುಗಳಿಗೆ ತಿರುಗೇಟು ನೀಡಿದ್ದ ಯೋಗಿ ಆದಿತ್ಯನಾಥ್, "ಅವರು ಅಧಿಕಾರದಲ್ಲಿದ್ದಾಗ ಇದೇ ರೀತಿ ಮಾಡುತ್ತಿದ್ದರು ಎನ್ನುವುದು ಇದರಿಂದ ಗೊತ್ತಾಗುತ್ತಿದೆ. ಅದಕ್ಕಾಗಿಯೇ ಅವರು ಈ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

UP Elections: ದೇಶದ ಮಹಿಳೆಯರಿಗೆ ಒಂದಾಗಲು ಪ್ರಿಯಾಂಕಾ ಗಾಂಧಿ ಕರೆ, ನಾವು ದೇಶದ ರಾಜಕೀಯ ಬದಲಾಯಿಸೋಣ!
ಇದಕ್ಕೂ ಮುನ್ನ ಭಾನುವಾರ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ, ಸರ್ಕಾರದ ಕೆಲಸವೇನು? ವಿಕಾಸ ಮಾಡುವುದು, ಜನರ ಸಮಸ್ಯೆಗಳನ್ನು ದೂರ ಮಾಡುವುದು, ಅತ್ಯಾಚಾರಗಳನ್ನು ನಿಲ್ಲಿಸುವುದು. ಆದರೆ ಸರ್ಕಾರ ಈ ಎಲ್ಲಾ ಕೆಲಸಗಳನ್ನು ಮಾಡುವುದು ಬಿಟ್ಟು, ಪ್ರತಿಪಕ್ಷಗಳ ಫೋನ್ ಕದ್ದಾಲಿಕೆ ಮಾಡುವುದರಲ್ಲಿ ನಿರತವಾಗಿದೆ ಎಂದು ಹೇಳಿದ್ದರು.

Assembly Elections: 70 ವರ್ಷದ ರಾಗ ಬಿಡಿ, 7 ವರ್ಷದಲ್ಲಿ ಏನು ಮಾಡಿದ್ರಿ ಹೇಳಿ: ಮೋದಿಗೆ ಪ್ರಿಯಾಂಕಾ ಸವಾಲು!
ಸುದ್ದಿಗಾರರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಗ್ ರಾಜ್ ನಲ್ಲಿ ನಡೆಸಿದ "ನಾರಿ ಶಕ್ತಿ" ಸಮಾವೇಶದ ಕುರಿತಾಗಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ರಾಯ್ ಬರೇಲಿಯಲ್ಲಿ (Rae Bareli) ನಾನು ನಡೆಸಿದ ಲಡ್ಕಿ ಹೂಂ ಲಡ್ ಸಕ್ತಿ ಹೂಂ ಶಕ್ತಿ ಸಂವಾದದ (Ladki Hoon Lad Sakti Hoon Shakti Samvaad )ಬಳಿಕ ಪ್ರಧಾನಿ ಮೋದಿ ಮಹಿಳೆಯರ ಸಶಕ್ತೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. "ಮಹಿಳೆಯರು ಈಗ ಜಾಗೃತರಾಗಿದ್ದಾರೆ. ಈ ದೇಶದ ಮಹಿಳೆಯರ ಶಕ್ತಿ ಕಂಡು ಪ್ರಧಾನಿ ಮೋದಿ ತಲೆಬಾಗಿದ್ದಾರೆ. ಇದು ಉತ್ತರ ಪ್ರದೇಶ ಮಹಿಳೆಯರ ಗೆಲುವು. ನನಗೆ ಬಹಳ ಸಂತೋಷವಾಗಿದೆ ಎಂದು ಹೇಳಿದ್ದಾರೆ.

"ಉತ್ತರಪ್ರದೇಶದಲ್ಲೀಗ ಸಾಲು ಸಾಲು ಹೊಸ ಯೋಜನೆಗಳು ಘೋಷಣೆಯಾಗಿವೆ. ಇದೆಲ್ಲವೂ ಮೊದಲೇ ಯಾಕೆ ಘೋಷಣೆಯಾಗಿಲ್ಲ. ಚುನಾವಣೆ ಬರಲಿದೆ ಎನ್ನುವ ಸೂಚನೆ ಸಿಕ್ಕಾಗ ಈ ಯೋಜನೆಗಳನ್ನು ಪ್ರಕಟಿಸಲಾಗಿದೆ. ನಾನು ಇಲ್ಲಿನ ಮಹಿಳೆಯರಿಗೆ ಹೇಳಿದ್ದೇನು? ನಿಮ್ಮ ಶಕ್ತಿಯನ್ನು ನೀವು ಉಪಯೋಗಿಸಿ ಎನ್ನುವುದು, ಈಗ ಇದಕ್ಕೆ ಸ್ವತಃ ಪಿಎಂ ಮೋದಿ ತಲೆಬಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರು ಈ ಯೋಜನೆಗಳನ್ನು ಘೋಷಣೆ ಮಾಡಬಹುದಿತ್ತು. ಈಗ ಮಾಡುತ್ತಿರುವುದಕ್ಕೆ ಕಾರಣ ಚುನಾವಣೆ" ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios