ಚೆನ್ನೈ(ಡಿ. 04)  ಸಿಟ್ಟುಗೊಂಡ ಮನುಷ್ಯನೊಬ್ಬ ಬ್ಯಾಂಕಿಗೆ ಚಾಕು ಮತ್ತು ಗನ್ ತೆಗೆದುಕೊಂಡು ಹೋಗಿ ಹೆದರಿಸಿದ್ದಾನೆ. ಅವನೇನೂ ಬ್ಯಾಂಕ್ ದರೋಡೆ ಮಾಡಲು ಹೋದವನಲ್ಲ.

ಕೋಯಂಬತೂರಿನ ಕೆನರಾ ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿ ಏಕಾಏಕಿ ಸಿಬ್ಬಂದಿಯನ್ನು ಹೆದರಿಸಿದ್ದಾನೆ.  ಮೋಟಾರ್ ಮ್ಯಾನುಪ್ಯಾಕ್ಚರಿಂಗ್ ಘಟಕ ಹೊಂದಿದ್ದ ವೆಟ್ರಿವೇಲು ಕಳೆದ ಮಾರ್ಚ್ ನಲ್ಲಿ ಒಂದು ಕೋಟಿ ರೂ. ಸಾಲಕ್ಕೆ ಅರ್ಜಿ ಹಾಕಿದ್ದ.  ಆದರೆ ಬ್ಯಾಂಕ್ ಆತನ ಪ್ರಪೋಸಲ್ ತಿರಸ್ಕಾರ ಮಾಡಿತ್ತು.

ಈ ಮಧ್ಯೆ ವೆಟ್ರಿವೇಲು ಸಾಲ ಖಂಡಿತ ಕೊಡಿಸುತ್ತೇನೆ ಎಂದು ನಂಬಿಸಿದ್ದ ದಲ್ಲಾಳಿಗೆ ಮೂರು ಲಕ್ಷ ರೂ. ಸಹ ನೀಡಿದ್ದರು. ಇದೆಲ್ಲದರಿಂದ ಸಿಟ್ಟುಗೊಂಡಿದ್ದ ವ್ಯಕ್ತಿ ಚಾಕು ಮತ್ತು ಗನ್ ನೊಂದಿಗೆ ಬ್ಯಾಂಕ್ ಗೆ ನುಗ್ಗಿ ಮ್ಯಾನೇಜರ್ ಮೇಲೆ ಹಲ್ಲೆ ಮಾಡಲು ಯತ್ನ ನಡೆಸಿದ್ದಾನೆ. 

ವೆಟ್ರಿವೇಲು ಅವರು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅನೇಕ ಕಡೆ ಸಾಲ ಮಾಡಿಕೊಂಡಿದ್ದ ವ್ಯಕ್ತಿ ಆತ್ಮಹತ್ಯೆಗೂ ಯತ್ನ ಮಾಡಿದ್ದರು ಎನ್ನಲಾಗಿದೆ. ನಾವು ಅವರ ಸಾಲ ನೀಡಿಕೆ ಬಗ್ಗೆ ಪ್ರಯತ್ನ ಮಾಡಿದ್ದೇವು. ಆದರೆ ಅವರು ಕೇಳಿದ್ದು ದೊಡ್ಡ ಮೊತ್ತವಾಗಿತ್ತು. ಮುಖ್ಯ ಕಚೇರಿಯಿಂದಲೇ ಅವರ ಪ್ರಪೋಸಲ್ ರಿಜಕ್ಟ್ ಮಾಡಲಾಗಿತ್ತು ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.