ಬೆಂಗಳೂರು (ಏ. 22): ಅಂಬರೀಷ್ ಮನವೊಲಿಕೆ‌ ಸಿಎಂ ಹೊಸ ಪ್ಲಾನ್ ಮಾಡಿದ್ದಾರೆ. 

ಯಾವುದೇ ಕಾರಣಕ್ಕೂ ಸ್ಪರ್ಧಿಸಲ್ಲ ಎಂದು ಕುಳಿತಿರುವ ಅಂಬಿ ಮನವೊಲಿಕೆ ಸಿಎಂ ಕಸರತ್ತು ನಡೆಸಿದ್ದಾರೆ.  ಟಿಕೆಟ್ ಕೊಟ್ಟಿದ್ದಾಗಿ, ಬಿ ಫಾರಂ ಮನೆಗೆ ತಲುಪಿಸುತ್ತೇವೆ. ಚುನಾವಣಾ ಖರ್ಚನ್ನು  ಪಕ್ಷವೇ ನೋಡಿಕೊಳ್ಳುತ್ತದೆ. ಅಂಬಿ ಸ್ಪರ್ಧಿಸಲಿ ಎಂದು  ಸಿಎಂ ಹೇಳಿದ್ದಾರೆ. 

ನಾಮಪತ್ರ ಸಲ್ಲಿಸಿ ಸ್ಪರ್ಧಿಸಲಿ. ಅಂಬರೀಷ್ ಚುನಾವಣಾ ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಡ. ಈ ಬಗ್ಗೆ ಅಂಬಿ ಜೊತೆ ಮಾತನಾಡಲು, ಸಚಿವ ಜಾರ್ಜ್, ಅಮರಾವತಿ ಚಂದ್ರಶೇಖರ್ ಗೆ ಸಿಎಂ ಸೂಚಿಸಿದ್ದಾರೆ. 
ಚುನಾವಣೆ ಸ್ಪರ್ಧೆ ಬಗ್ಗೆ ಹಣ ಯಾರ್ ತರ್ತಾರೆ ಹೋಗಯ್ಯ ಎಂದು ಆಪ್ತರ ಬಳಿ ಅಂಬಿ ಹೇಳಿಕೊಂಡಿದ್ದರಂತೆ. ಅಂಬಿ ಚುನಾವಣಾ ಖರ್ಚನ್ನು ನೋಡಿಕೊಳ್ಳೋಣ ಸ್ಪರ್ಧಿಸಲಿಕ್ಕೆ ಹೇಳಿ ಎಂದು ಸಿಎಂ ಹೇಳಿದ್ದಾರೆ.