Asianet Suvarna News Asianet Suvarna News

82 ದಿನಗಳಲ್ಲಿ 40 ದೇವಾಲಯಗಳಿಗೆ ಸಿಎಂ ಭೇಟಿ

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡ 82 ದಿನಗಳಲ್ಲಿ ಒಟ್ಟು  40 ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. 

CM Kumaraswamy Visits 40 Temples In in 82 Days
Author
Bengaluru, First Published Aug 14, 2018, 4:07 PM IST

ಬೆಂಗಳೂರು:  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡ 82 ದಿನಗಳಲ್ಲಿ ಒಟ್ಟು  40 ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. 

ಭಾನುವಾರದವರೆಗೂ ಒಟ್ಟು  34 ದೇವಾಲಯಗಳಿಗೆ ಭೇಟಿ ನೀಡಿದ್ದು ಸೋಮವಾರ 6 ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದಾಗಿ ಟೈಮ್ಸ್ ಇಂಡಿಯಾದಲ್ಲಿ ವರದಿ ಮಾಡಲಾಗಿದೆ. 

ಸೋಮವಾರ ಒಟ್ಟು 6 ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ 40 ದೇವಾಲಯಗಳಿಗೆ ಭೇಟಿ ನೀಡಿದಂತಾಗಿದೆ  

ಸೋಮವಾರ ಭಾರೀ ಮಳೆಯ ನಡುವೆಯೂ ಕೂಡ ಕುಕ್ಕೆ ಸುಬ್ರಮಣ್ಯ ಹಾಗೂ ಧರ್ಮಸ್ಥಳಗಳಿಗೆ ಭೇಟಿ ನೀಡಿದ್ದು, ಈ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೂಡ ದೇವಾಲಯಗಳ ಭೇಟಿಯಲ್ಲಿ ಮೀರಿಸಿದ್ದಾರೆ. 

ದೇವರು ಹಾಗೂ ಜ್ಯೋತಿಷ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುಟುಂಬ ಹೆಚ್ಚಿನ ನಂಬಿಕೆ ಹೊಂದಿದ್ದು, ಪೂಜೆ ಸಂಸ್ಕಾರಗಳಲ್ಲಿ ಅಪಾರ ಶ್ರದ್ದೆ ಇದ್ದು,  ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಬಗ್ಗೆಯೂ ಕೂಡ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. 

Follow Us:
Download App:
  • android
  • ios